ಐಟಿ ದಾಳಿ ಮೂಲಕ ಕೇಂದ್ರಕ್ಕೆ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಟಿಟಿವಿ ದಿನಕರನ್

ವರದಿಗಾರ: ಶಶಿಕಲಾ ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯು ರಾಜಕೀಯ ಪ್ರೇರಿತವಾಗಿದ್ದು, ಐಟಿ ದಾಳಿಯ ಹಿಂದೆ ಕೇಂದ್ರ ಸರಕಾದ ನೇರ ಕೈವಾಡವಿದೆ. ಐಟಿ ದಾಳಿ ಮೂಲಕ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ನಾವು  ಹೆದರುವುದಿಲ್ಲ ಎಂದು ಶಶಿಕಲಾ ಆಪ್ತ ಟಿಟಿವಿ ದಿನಕರನ್ ಹೇಳಿದ್ದಾರೆ.
ಚೆನ್ನೈನಲ್ಲಿ ತಮ್ಮ ನಿವಾಸದಲ್ಲಿ ದಿನಕರನ್ ಮಾತನಾಡುತ್ತಾ, ತಮಿಳುನಾಡು ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಐಟಿ ದಾಳಿ ಮತ್ತು ಅದರ ಹಿನ್ನಲೆ ಏನು ಎಂಬುದನ್ನೂ ಕೂಡ ಅವರು ಅರಿತಿದ್ದು, ಎಲ್ಲದಕ್ಕೂ ಚುನಾವಣೆ  ವೇಳೆ ಉತ್ತರಿಸುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಐಟಿ ದಾಳಿ ಮೂಲಕ ನಮ್ಮನ್ನು ಮಣಿಸುವ ಉದ್ದೇಶ ಕೇಂದ್ರ ಸರಕಾರದ್ದಾಗಿದ್ದರೆ ಅದು ಅವರ ಹಗಲು ಕನಸಷ್ಟೇ. ರಾಜ್ಯವನ್ನು ಲೂಟಿ ಮಾಡಿದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ನೇರವಾಗಿ ಪನ್ನೀರ್ ಸೆಲ್ವಂ ಹಾಗೂ ಪಳನಿ  ಸಾಮಿ ಬಣಕ್ಕೆ ಚಾಟಿ ಬೀಸಿದ್ದಾರೆ.
ಇನ್ನು ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಜಯಾ ಟಿವಿ, ಜಾಝ್ ಸಿನಿಮಾ ಸೇರಿದಂತೆ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದು, ತಮಿಳುನಾಡಿನ 145 ಪ್ರದೇಶಗಳೂ ಸೇರಿದಂತೆ  ಒಟ್ಟು 160 ಪ್ರದೇಶಗಳಲ್ಲಿ ಏಕಕಾಲಾಕ್ಕೆ ದಾಳಿ ನಡೆಸಿದ್ದರು.
error: Content is protected !!
%d bloggers like this:
Inline
Inline