ಸಾಮಾಜಿಕ ತಾಣ

ಟಿವಿಯ ನೇರ ಕಾರ್ಯಕ್ರಮದಲ್ಲೇ ದಾಖಲಾಯ್ತು ಭೂಕಂಪದ ದೃಶ್ಯಗಳು: ವೀಡಿಯೋ ವೈರಲ್

ವರದಿಗಾರ : ಟಿವಿಯಲ್ಲಿ ನಡೆಯುತ್ತಿದ್ದ ನೇರ ಚರ್ಚಾ ಕಾರ್ಯಕ್ರಮವೊಂದು ಭೂಕಂಪನದ ಅನುಭವದಿಂದಾಗಿ ಸ್ಥಗಿತಗೊಂಡ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಇರಾನ್-ಇರಾಕ್ ಗಡಿ ಭಾಗದಲ್ಲಿ , ರಿಕ್ಟರ್ ಮಾಪಕದಲ್ಲಿ  7.3 ತೀವ್ರತೆಯಲ್ಲಿ ಸಂಭವಿಸಿದ ಭೀಕರ ಭೂಕಂಪ 400 ಜನರ ಪ್ರಾಣ ಹಾನಿಗೆ ಕಾರಣವಾಗಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ.

ಟಿವಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಆ ಭಾಗದಲ್ಲಿ ಸಂಭವಿಸಿದ ಭೂಕಂಪ ಕಾರ್ಯಕ್ರಮವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದು, ದೃಶ್ಯಗಳು ಭೂಕಂಪನದ ತೀವ್ರತೆಯನ್ನು ತೋರಿಸುತ್ತಿದ್ದವು. ‘ರುಡಾಲ್’ ಟಿವಿಯ ಎರ್ಬಿಲ್ ಪ್ರದೇಶದ ವರದಿಗಾರ ನೇರ ಚರ್ಚೆಯಲ್ಲಿ ಸುಲೈಮಾನಿಯಾ ಪ್ರದೇಶದ ಅತಿಥಿಯೊಬ್ಬರೊಂದಿಗೆ ಮಾತನಾಡುತ್ತಿದ್ದಾಗ ಅವರು ಭೂಕಂಪನದಿಂದಾಗಿ ನಡುಗುತ್ತಿರುವ ದೃಶ್ಯಗಳು ಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಭಯಗ್ರಸ್ತ ಅತಿಥಿಯು, “ಇಲ್ಲಿ ಭೂಕಂಪನವಾಗುತ್ತಿದೆ, ನಾನು ಹೊರ ಹೋಗುತ್ತಿದ್ದೇನೆ, ದಯವಿಟ್ಟು ಕ್ಷಮಿಸಿ” ಎನ್ನುತ್ತಾ ದೃಶ್ಯವನ್ನು ಸ್ಥಗಿತಗೊಳಿಸುತ್ತಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group