ರಾಜ್ಯ ಸುದ್ದಿ

ಯುವಾ ಬ್ರಿಗೇಡ್’ನಿಂದ ಪೊಲೀಸರಿಗೆ ಉಪನ್ಯಾಸ; ಎ ಡಿ ಜಿ ಪಿ ಯಿಂದ ತನಿಖೆಗೆ ಆದೇಶ

ವರದಿಗಾರ : ಹೊಸಪೇಟೆಯ ಗೃಹರಕ್ಷಕ ದಳ ಕಛೇರಿಯಲ್ಲಿ ಯುವ ಪೊಲೀಸರಿಗೆ “ನವ ಕರ್ನಾಟಕದ ಕನಸು” ಎಂಬ ವಿಷಯದ ಕುರಿತಂತೆ ಯುವಾ ಬ್ರಿಗೇಡ್ ಉಪನ್ಯಾಸ ಏರ್ಪಡಿಸಿದ ಘಟನೆಯ ಕುರಿತು ಅಧಿಕಾರಿಗಳಿಂದ ತನಿಖೆಗೆ ಆದೇಶಿಸಲಾಗಿದೆಯೆಂದು ತುರ್ತು ಸೇವೆಗಳ ಎ ಡಿ ಜಿ ಪಿ ಸೌಮ್ಯೇಂದು ಮುಖರ್ಜಿ ತಿಳಿಸಿದ್ದಾರೆ.

ಘಟನೆಯ ಕುರಿತಂತೆ ‘ವರದಿಗಾರ’ ಸುದ್ದಿ ತಾಣವು ಸುದ್ದಿಯನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನಪಟ್ಟಿತ್ತು

ಹೊಸಪೇಟೆಯ ಯುವಾ ಬ್ರಿಗೇಡಿನ ಸಂಚಾಲಕ ಚಂದ್ರಶೇಖರ್ ಎಂಬಾತ ಗೃಹರಕ್ಷಕ ಸಿಬ್ಬಂದಿಗಳಿಗೆ ಉಪನ್ಯಾಸ ನೀಡಿದ್ದು ರಾಜ್ಯದಾದ್ಯಂತ ವಿವಾದ ಸೃಷ್ಟಿಸಿತ್ತು. ಈ ಕುರಿತು ಹೇಳಿಕೆ ನೀಡಿದ ಎ ಡಿ ಜಿ ಪಿ ಮುಖರ್ಜಿ, ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ಸಂಘಟನೆಯಿಂದ ಕಾರ್ಯಕ್ರಮ ಆಯೋಜಿಸಿದ್ದು ಒಂದು ಸೂಕ್ಷ್ಮ ವಿಚಾರವಾಗಿದ್ದು, ಇದರ ಕುರಿತು ತನಿಖೆ ನಡೆಸಿ, ಕ್ಷಿಪ್ರ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ನರೇಶ್ ಶೆಣೈಯ ಯುವಾ ಬ್ರಿಗೇಡ್’ನಿಂದ ಪೊಲೀಸರಿಗೆ ‘ಕರ್ನಾಟಕ ನಿರ್ಮಾಣ’ ದ ಪಾಠ!! 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group