ರಾಷ್ಟ್ರೀಯ ಸುದ್ದಿ

ಸರ್ವರಿಗೂ ಸಮಾನ ಹಕ್ಕುಗಳಿರುವ ಭಾರತವನ್ನು ಕಾಣ ಬಯಸುತ್ತೇನೆ: ಬಿಜೆಪಿ ಸಂಸದ ವರುಣ್ ಗಾಂಧಿ

ವರದಿಗಾರ: ಭಾರತವು ಜಾತ್ಯತೀತ ರಾಷ್ಟ್ರವಾಗಬೇಕು ಮತ್ತು ಸರ್ವರಿಗೂ ಸಮಾನ ಹಕ್ಕುಗಳಿರುವ ಭಾರತವನ್ನು ಕಾಣ ಬಯಸುತ್ತೇನೆ ಎಂದು ಉತ್ತರ ಪ್ರದೇಶ ಸುಲ್ತಾನ್‌ಪುರ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿಕೆ ನೀಡಿದ್ದು, ಮತ್ತೊಮ್ಮೆ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅವರು ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ನಾನು ಫಿರೋಜ್ ವರುಣ್ ಗಾಂಧಿ. ನನ್ನ ಹೆಸರಿನಲ್ಲಿ ಗಾಂಧಿ ಎಂಬ ಉಪನಾಮ ಇಲ್ಲದಿದ್ದರೆ ನಾನು 29ನೇ ವಯಸ್ಸಿಗೇ ಸಂಸದನಾಗುತ್ತಿದ್ದೆನೇ? ವರುಣ್ ದತ್ತಾ, ಘೋಷ್ ಅಥವಾ ಖಾನ್ ಇತ್ಯಾದಿ ಉಪನಾಮಗಳು ಮುಖ್ಯವಲ್ಲದೇ ಇರುವ ಭಾರತವನ್ನು ನಾನು ನೋಡಬಯಸುತ್ತೇನೆ. ಹೆಸರುಗಳನ್ನು ನೋಡದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಭಾರತವನ್ನು ಕಾಣಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದಲ್ಲಿ ಅಂತಹವರನ್ನು ಹುದ್ದೆಯಿಂದ ತೆರವುಗೊಳಿಸುವ ಅಧಿಕಾರವನ್ನು ಮತದಾರರಿಗೆ ನೀಡುವ ವಿಷಯಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ವರುಣ್ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group