ಚಿತ್ರಕೂಟ ವಿಧಾನಸಭೆ ಉಪ ಚುನಾವಣೆ: ಕಾಂಗ್ರೆಸ್‌ ಜಯಭೇರಿ, ಬಿಜೆಪಿಗೆ ಮುಖಭಂಗ

ವರದಿಗಾರ: ಮಧ್ಯಪ್ರದೇಶದ ಚಿತ್ರಕೂಟ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಯಾಗಿದ್ದು, ಬಿಜೆಪಿಗೆ ಮುಖಭಂಗವಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ನೀಲಾಂಶು ಚತುರ್ವೇದಿ, ಪ್ರತಿಸ್ಪರ್ಧಿ ಬಿಜೆಪಿಯ ಶಂಕರ್‌ ದಯಾಳ್ ತ್ರಿಪಾಠಿ ಅವರನ್ನು 14,133 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚತುರ್ವೇದಿ 66,810 ಮತಗಳನ್ನು ಪಡೆದರೆ, ತ್ರಿಪಾಠಿ 52,677 ಮತಗಳನ್ನು ಪಡೆದಿದ್ದಾರೆ.

ಚಿತ್ರಕೂಟ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದ ಪ್ರೇಮ್‌ ಸಿಂಗ್ ಅವರ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಸಿಂಗ್ ಈ ಹಿಂದೆ 1998, 2003 ಮತ್ತು 2013ರಲ್ಲಿ ಜಯ ಗಳಿಸಿದ್ದರು. ಆದರೆ 2008ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದರ್‌ ಸಿಂಗ್ ಗಾಹರ್‌ವರ್‌ ಅವರ ಎದುರು ಸೋಲು ಕಂಡಿದ್ದರು.

error: Content is protected !!
%d bloggers like this:
Inline
Inline