ನರೇಶ್ ಶೆಣೈಯ ಯುವಾ ಬ್ರಿಗೇಡ್’ನಿಂದ ಪೊಲೀಸರಿಗೆ ‘ಕರ್ನಾಟಕ ನಿರ್ಮಾಣ’ ದ ಪಾಠ!!

ವರದಿಗಾರ : ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ ಸ್ಥಾಪಿಸಿದ್ದ ‘ಯುವಾ ಬ್ರಿಗೇಡ್’ (ಪೂರ್ವ ನಾಮ ನಮೋ ಬ್ರಿಗೇಡ್) ಹೊಸಪೇಟೆಯಲ್ಲಿ ಪೊಲೀಸರಿಗೆ “ನನ್ನ ಕನಸಿನ ಕರ್ನಾಟಕ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡ ಕುರಿತು ವರದಿಯಾಗಿದೆ. ಓರ್ವ ಕೊಲೆ ಆರೋಪಿ ಸ್ಥಾಪಿಸಿರುವ ಸಂಘಟನೆಯೊಂದು ಕಾನೂನು ಸಂರಕ್ಷಣೆಯ ಹೊಣೆ ಹೊತ್ತ ಆರಕ್ಷಕರಿಗೇ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ತಮ್ಮ ಕಾರ್ಯಕ್ರಮದ ವಿವರಗಳನ್ನು ಯುವಾ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಯುವ ಪೊಲೀಸರು ನನ್ನ ಕನಸಿನ ಕರ್ನಾಟಕದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆಂದು’ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು,  ಸಂಘಟನೆಯ ಹಿನ್ನೆಲೆ ಮತ್ತು ಪೂರ್ವಾಪರಗಳ ಕುರಿತು ತಿಳಿದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೇ ಎನ್ನುವುದನ್ನು ಅವರ ಮೇಲಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಈ ಯುವಾ ಬ್ರಿಗೇಡಿನ ಸ್ಥಾಪಕಾಧ್ಯಕ್ಷ ನರೇಶ್ ಶೆಣೈ , ಮಂಗಳೂರಿನ ಆರ್ ಟಿ ಐ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗಾರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಮೂರು ತಿಂಗಳುಗಳ ಕಾಲ ಜೈಲಿನಲ್ಲಿದ್ದು ಕಳೆದ ವರ್ಷ ಸೆಪ್ಟಂಬರ್’ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

error: Content is protected !!
%d bloggers like this:
Inline
Inline