ದಾಳಿ ಮಾಡಲು ಬಂದ ಸ್ವಯಂ ಘೋಷಿತ ಗೋ ರಕ್ಷಕರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ವರದಿಗಾರ: ಮನೆಯಲ್ಲಿ ದನದ ಮಾಂಸವಿದೆ ಎಂದು ಶಂಕಿಸಿ ದಾಳಿ ಮಾಡಲು ಬಂದ ಸ್ವಯಂ ಘೋಷಿತ ಗೋರಕ್ಷಕರಿಗೆ ಬಿಹಾರದಲ್ಲಿ ಗ್ರಾಮಸ್ಥರು ಅಟ್ಟಾಡಿಸಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಿಹಾರದ ದರ್ಭಂಗ ಜಿಲ್ಲೆಯ ಉರ್ದು ಬಝಾರ್ ಎಂಬಲ್ಲಿನ ಮನೆಯೊಂದರಲ್ಲಿ ದನದ ಮಾಂಸವಿದೆ ಎಂದು ಸುಮಾರು 7-8 ಜನರ ತಂಡ ಮನೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಈ ಸಮಯದಲ್ಲಿ ಎಚ್ಚೆತ್ತುಕೊಂಡ ಮನೆಯವರು ಮತ್ತು  ಗ್ರಾಮಸ್ಥರು ಜಮಾಯಿಸಿದ್ದರು. ಆರಂಭದಲ್ಲಿ ಮನೆಯವರು ಸ್ವಯಂ ಘೋಷಿತರೊಂದಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದರು. ಆದರೆ ದಾಳಿಗೆಂದೇ ಬಂದವರ ದರ್ಪ ಮಿತಿ ಮೀರ ತೊಡಗಿದಾಗ ಆಕ್ರೋಶಿತಗೊಂಡ ಗ್ರಾಮಸ್ಥರು ಚೆನ್ನಾಗಿ ಪಾಠ ಕಲಿಸಿದ್ದಾರೆ.

ಪರಿಸ್ಥಿತಿ ಕೈ ಮೀರುವುದನ್ನು ಅರಿತ ಸ್ವಯಂ ಘೋಷಿತ ಗೋ ರಕ್ಷಕರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಬೆನ್ನಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ನೀವು ಆ ಊರಿನವರೇ ಅಲ್ಲವೆಂದ ಮೇಲೆ ಆ ಕೇರಿಗೆ ಹೋಗಿದ್ದಾದರೂ ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗಾಯಾಳುಗಳಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ‘ವೈರಲ್ ಆನ್ ಭಾರತ್’ ವರದಿ ಮಾಡಿವೆ.

ಈ ಬಗ್ಗೆ ಗ್ರಾಮಸ್ಥರೊಬ್ಬರು ಪ್ರತಿಕ್ರಿಸುತ್ತಾ, ಮೊದಲು ಇದೇ ಊರಿನಲ್ಲಿ ಮೂರು ಬಾರಿ ದಾಳಿ ಮಾಡಿದ್ದ ಸ್ವಯಂಘೋಷಿತ ಗೋ ರಕ್ಷಕರು ದನ ಸಾಗಾಟದ ಹೆಸರಿನಲ್ಲಿ ಊರಿನ ಯುವಕರಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಪದೇ ಪದೇ ಪೆಟ್ಟು ತಿಂದು ಮೊದಲೇ ಕುಪಿತರಾಗಿದ್ದ ಊರವರು ಈ ಬಾರಿ ಹಳೆಯ ಎಲ್ಲಾ ಬಾಕಿಯನ್ನು ಚುಕ್ತಾ ಮಾಡಿದ್ದಾರೆ ಎಂದು ಹೇಳಿದ್ದಾರೆ.

error: Content is protected !!
%d bloggers like this:
Inline
Inline