ನಾನೂ ನೀನೂ ಭಲೇ ಭಲೇ…!!! -ಬುಲೆಟ್ ಅಂಕಣ

-ಅನ್ಸಾರ್ ಕಾಟಿಪಳ್ಳ

ದಿನಬಳಕೆಯ ಬೆಲೆ ಬಹಳ
ಸಾಂತ್ವನಿಸುವವರಿಲ್ಲಿ ವಿರಳ!
ಬೆವರೊಳಗೂ ತರ ತೆರಿಗೆ
ಮನೆ, ಮನದೊಳಗೂ ಕರಾಳ!!!

ಮತ ಕೊಟ್ಟು ಆರಿಸಿದೆವು
ಹೆಗಲು ಕೊಟ್ಟು ಏರಿಸಿದೆವು!
ಪರವಾಗಲು ಬರಬಾರದ
ಹುಸಿ ಕನಸನು ಕಾದಿರುವ
ನಾನೂ, ನೀನೂ…ಭಲೇ ಭಲೇ!!!

ತೆನೆ, ಪೈರಿನ ಕನಸಿರದಾ
ಬಿಲದೊಳಗೇ ಬೆಳೆಗಾರರು!
ಕೈ ಮುಗಿಯಲು ಬಳಿ ಸಾಕುವ
ಸಂವಿಧಾನದ ಕೊಲೆಗಾರರು!
ತನು ಮನವೂ ಬೆಲೆ ಬಾಳದ
ಆಳ್ವಿಕೆಯಿದು…ಭಲೇ ಭಲೇ!!!

ಬಡ ಜೀವಗಳು ಕೈ ಚಾಚಿದರೆ
ಮೇಲ್ವರ್ಗವು ಮೈ ಮರೆತರು!
ನಡು ಜೀವಗಳ ತೊಳಲಾಟವ
ಕೇಳುವರೇ ಹೇಳಿ!
ಒಳ ಭಾರವ ಹೊರ ಸೂಸದ
ಹೊರ ನಗುವೇ…ಭಲೇ ಭಲೇ!!!

ಸರಿ ಸಾರಗಳು ಸ್ವರವಾಗದೆ
ನರಿ ಘೋರಗಳು ಕೊನೆಯಾಗದು!
ಪ್ರತಿರೋಧವು ಪಥವಾಗದೆ
ಬರ ದಾರಿಗಳು ಬಂದಾಗದು!
ಗರಿ ಮಾತಿಗೆ ಮರುಳಾಗದೆ
ಸೆಟೆದೆದ್ದರೆ…ಬಾಳು,ಭಲೇ ಭಲೇ!!!

 

error: Content is protected !!
%d bloggers like this:
Inline
Inline