ಬೆಂಕಿ ಹಚ್ಚುವುದು ಆರೆಸ್ಸೆಸ್ ಕೆಲಸ: ಮಾಜಿ ಕಾರ್ಯಕರ್ತ ಕೃಷ್ಣಪ್ಪ

  • 13ವರ್ಷದಲ್ಲಿ ಆರೆಸ್ಸೆಸ್ ನಲ್ಲಿದ್ದು ಜೀವನ ಹಾಳು ಮಾಡಿಕೊಂಡಿದ್ದೇನೆ.

ವರದಿಗಾರ: ಆರೆಸ್ಸೆಸ್ ನಾಯಕರು ಹೋದಲ್ಲೆಲ್ಲಾ ದ್ವಂದ ಸೃಷ್ಠಿಸಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ಸಮಾಜದ ಸಾಮರಸ್ಯಕ್ಕಾಗಿ ಬೆಂಕಿ ಪಟ್ಟಣ ಇಟ್ಟುಕೊಂಡು ಹೋಗಬಾರದೆಂದು ಆರೆಸ್ಸೆಸ್ ಮಾಜಿ ಕಾರ್ಯಕರ್ತ, ಜನಜಾಗೃತಿ ಹೋರಾಟಗಾರರಾದ ಟಿ.ಆರ್. ಕೃಷ್ಣಪ್ಪ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಆರೆಸ್ಸೆಸ್ ನ ಹಿರಿಯ ಪ್ರಚಾರಕ ಸೀತಾರಮ ಕೇದಿಲಾಯ ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ರಿಪ್ಪನ್ ಪೇಟೆ ಹೆಸರನ್ನು ಬದಲಾಯಿಸುವಂತೆ ಮತ್ತು ಬೇರೆ ಹೆಸರಿಗೆ ನಾಮಕರಣ ಮಾಡುವಂತೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮೇಲಿನ ಹೇಳಿಕೆಯನ್ನು ಟಿ.ಆರ್. ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಿಜವಾಗಿಯೂ ಆರೆಸ್ಸೆಸ್ಸಿಗರು ಸಮಾಜದಲ್ಲಿ ಪರಿವರ್ತನೆ ಬಯಸುವುದಾದರೆ ಜಾತಿ ಜನಾಂಂಗಗಳ ಮಧ್ಯೆ ವಿಷಬೀಜ ಬಿತ್ತುತ್ತಾ ಶಾಂತಿ ನೆಮ್ಮದಿಯನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು. ತಾನು ಸಹಿತ ಆರೆಸ್ಸೆಸ್ ನ ಮಾಜಿ ಕಾರ್ಯಕರ್ತನಾಗಿದ್ದು, ಟೊಪ್ಪಿ ಹಾಕುವುದನ್ನು ಹೊರತುಪಡಿಸಿ ಗಣವೇಶದಲ್ಲಿಯೇ ಹಾಜರಿದ್ದೇನೆ. ಸುಮಾರು 13 ವರ್ಷಗಳ ಆರೆಸ್ಸೆಸ್ ನ ಉಪದೇಶಗಳನ್ನು ನಂಬಿ ನನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದೇನೆ. ಇದರಿಂದ ಎಚ್ಚೆತ್ತು ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

error: Content is protected !!
%d bloggers like this:
Inline
Inline