ಸರಕಾರ ಮುಸ್ಲಿಮರ ಮುಂಜಿ ನಿಷೇಧಿಸಬೇಕಂತೆ; ಬಿಜೆಪಿ ನಾಯಕನ ಮಿತಿ ಮೀರಿದ ‘ಬಯಕೆ’ !!

ವರದಿಗಾರ : ಓಲೈಕೆಯ ರಾಜಕೀಯಕ್ಕಾಗಿ ಆದ್ಯಾವ ಮಟ್ಟಕ್ಕಾದರೂ ರಾಜಕಾರಣಿಗಳು ಇಳಿಯಬಹುದೆನ್ನುವುದಕ್ಕೆ ಸಾಕ್ಷಿಯಾಯಿತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇವತ್ತು ನಡೆದ ಬಿಜೆಪಿಯ ‘ಪರಿವರ್ತನಾ ರಾಲಿ’.

ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಬಿಜೆಪಿ ನಾಯಕ ಈಶ್ವರಪ್ಪನವರು ಮುಸ್ಲಿಮರ ಮುಂಜಿ ಕರ್ಮವನ್ನು ನಿಷೇಧಿಸುವಂತೆ ಸವಾಲೆಸೆದರು.
‘ಮೂಢನಂಬಿಕೆಯ ಹೆಸರಿನಲ್ಲಿ ಹಿಂದೂಗಳ ನಂಬಿಕೆಯನ್ನು ನಿಷೇದಿಸಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಸುನ್ನತ್(ಮುಂಜಿ) ನಿಷೇಧಿಸಲು ಸಾಧ್ಯವೇ” ಎಂದು ಪ್ರಶ್ನಿಸಿದರು.

ಹಿಂದೂಗಳ ಮುದ್ರಾಧಾರಣೆ ಮತ್ತು ತ್ರಿಶೂಲಧಾರಣೆಯನ್ನು ಮೂಢನಂಬಿಕೆ ಮತ್ತು ಹಿಂಸೆಯೆನ್ನುತ್ತಾ ನಿಷೇಧಿಸುವ ಮಾತನಾಡುವ ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ಮುಸಲ್ಮಾನರ ‘ಸುನ್ನತ್’ (ಮುಂಜಿ) ಕಾರ್ಯವನ್ನು ನಿಷೇಧಿಸಲು ಸಾಧ್ಯವೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈಶ್ವರಪ್ಪನವರ ಈ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ವರ್ಣರಂಜಿತ ಮತ್ತು ಅಷ್ಟೇ ಸ್ವಾರಸ್ಯಕರವಾದ ಚರ್ಚೆಗಳಿಗೆ ನಾಂದಿ ಹಾಡಿದೆ. ಜಾಲ ತಾಣಿಗರು ಹಲವು ರೀತಿಗಳಲ್ಲಿ ಈಶ್ವರಪ್ಪನವರನ್ನು ಛೇಡಿಸುತ್ತಾ ವ್ಯಂಗ್ಯವಾಡುತ್ತಿದ್ದಾರೆ.

ಒಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಲು ಅನಗತ್ಯ ವಿಷಯಗಳಲ್ಲಿ ‘ಕೈ’ ಆಡಿಸಲು ಮುಂದಾದ ಈಶ್ವರಪ್ಪನವರಿಗೆ ಜಾಲತಾಣಿಗರು ಅವರದ್ದೇ ಧಾಟಿಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ

error: Content is protected !!
%d bloggers like this:
Inline
Inline