ಎಬಿವಿಪಿಯ ‘ಕೇರಳ ಚಲೋ’ : ಕೇರಳ ಸುಧಾರಿಸಲು ಹೊರಟವರು ಒಂದು ತುತ್ತು ಅನ್ನಕ್ಕಾಗಿ ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡರು!!

ವರದಿಗಾರ: ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿ ಕೇರಳದ ಕೋಝಿಕ್ಕೋಡ್ ನಲ್ಲಿ ಸಿಕ್ಕಿಬಿದ್ದು ದಂಡ ಪಾವತಿಸಬೇಕಾದ ಎಬಿವಿಪಿ ಕಾರ್ಯಕರ್ತರ ಸುದ್ದಿ ಇದೀಗ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾಗಿದೆ. ಕೇರಳದ ಎಡಪಂಥೀಯರು ಹಿಂದೂ ವಿರೋಧಿ ಹಿಂಸೆ ನಡೆಸುತ್ತಿದ್ದಾರೆಂದು ಅರೋಪಿಸಿ ಎಬಿವಿಪಿ ಕಾರ್ಯಕರ್ತರು ‘ಚಲೋ ಕೇರಳ’ ಹಮ್ಮಿಕೊಂಡಿದ್ದರು.

ರಾಷ್ಟ್ರದಾದ್ಯಂತ ಸುದ್ದಿಯಾದ ಟಿಕೆಟ್ ರಹಿತ ಪ್ರಯಾಣ ಮಾಡಿದ ಎಬಿವಿಪಿ ಕಾರ್ಯಕರ್ತರ ಇನ್ನೊಂದು ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್ ನಿಂದ ಹೊರಟ ಎಬಿವಿಪಿ ತಂಡವು ಒಂದು ತುತ್ತು ಅನ್ನಕ್ಕಾಗಿ ತಮ್ಮದೇ ಸಂಘಟನೆಯ ಕಾರ್ಯಕರ್ತರೊಂದಿಗೆ ಉಜ್ಜಯಿನಿಯಲ್ಲಿ ಹೊಡೆದಾಡಿಕೊಂಡಿದ್ದರು.

ಇಂದೋರ್ ನಿಂದ ಹೊರಟ ಎಬಿವಿಪಿ ಕಾರ್ಯಕರ್ತರಿಗೆ ಊಟವನ್ನು ಒದಗಿಸುವ ಜವಾಬ್ದಾರಿಯನ್ನು ಉಜ್ಜಯಿನಿ ಎಬಿವಿಪಿ ಘಟಕಕ್ಕೆ ನೀಡಲಾಗಿತ್ತು. ತಮ್ಮ ಜವಾಬ್ದಾರಿಯನ್ನು ಉಜ್ಜಯಿನಿ ಘಟಕದ ಎಬಿವಿಪಿ ಕಾರ್ಯಕರ್ತರು ಬಹಳ ಚೆನ್ನಾಗಿ ನಿರ್ವಹಿಸಿದ್ದರು. ರೈಲಿನಲ್ಲಿರುವ ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೂ ಒಂದೊಂದು ಅನ್ನದ ಪೊಟ್ಟಣವನ್ನು ನೀಡಲಾಗಿತ್ತು. ಆದರೆ ಒಂದು ಕಂಪಾರ್ಟ್ಮೆಂಟ್ ನಲ್ಲಿ ಕುಳಿತಿದ್ದ ಕೆಲವು ಕಾರ್ಯಕರ್ತರಿಗೆ ಇದು ಸಾಕಾಗಿಲ್ಲವಂತೆ. ತಮಗೆ ಇನ್ನೊಂದು ಪೊಟ್ಟಣ ಬೇಕೆಂದು ಉಜ್ಜಯಿನಿ ಕಾರ್ಯಕರ್ತರೊಂದಿಗೆ ಜಗಳವಾಡಿದರು. ಇತ್ತಂಡಗಳ ನಡುವೆ ಹೊಡೆದಾಟವೂ ನಡೆಯಿತು ಎನ್ನಲಾಗಿದೆ. ನಂತರ ಆದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಬಿವಿಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಮಧ್ಯ ಪ್ರವೇಶಿಸಿ ಪ್ರಕರಣ ಇತ್ಯರ್ಥಗೊಳಿಸಿದರು ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಕೇರಳ ಸುಧಾರಿಸಲು ಹೊರಟವರು ಒಂದು ತುತ್ತು ಅನ್ನಕ್ಕಾಗಿ ತಮ್ಮ-ತಮ್ಮಲ್ಲೇ ಹೊಡೆದಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ- ಬಿಸಿ ಸುದ್ದಿ.

error: Content is protected !!
%d bloggers like this:
Inline
Inline