ತಬೂಕ್: ಸಂಕಷ್ಟದಲ್ಲಿದ್ದ ವ್ಯಕ್ತಿ ಕೆ.ಸಿ.ಎಫ್ ಸಹಾಯದಿಂದ ತಾಯ್ನಾಡಿಗೆ

ವರದಿಗಾರ- ತಬೂಕ್: ಸೌದಿ ಅರೇಬಿಯಾದ ತಬೂಕ್ ನಲ್ಲಿ  ಮಂಗಳೂರು ಮೂಲದ ಇಕ್ಬಾಲ್(62) ಎಂಬವರು ಸುಮಾರು 10 ವರ್ಷಗಳಿಂದ ತಬೂಕ್ ನಲ್ಲಿ ಕೆಲಸಕ್ಕಿದ್ದು, ಅವರ ಪ್ರಯೋಜಕರು ( ಕಫೀಲ್) ಸುಮಾರು ಆರು ತಿಂಗಳಿನಿಂದ ವೇತನ ಸಿಗದೆ ಸಂಕಷ್ಟದಲ್ಲಿದ್ದ ಅವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆ.ಸಿ.ಎಫ್) ಆಸರೆಯಾಗಿದ್ದು, ತಯ್ನಾಡಿಗೆ ಮರಳಲು ಸಹಾಯ ಮಾಡಿದೆ.
ದಿನಕ್ಕೆ 25 ರಿಯಾಲ್ ವೇತನ ಕೊಡುವುದಾಗಿಯೂ ನಂಬಿಸಿದ್ದ ಕಫೀಲ್ ವೇತನ ನೀಡುತ್ತಿರಲಿಲ್ಲ, ಇದರಿಂದ ಗಂಡು ಮಕ್ಕಳು ಇಲ್ಲದ ಬಡ ಕುಟುಂಬವು,  ಜೀವನ ಸಾಗಿಸಲು ಕಷ್ಟ ಪಡುವಂತಾಗಿದೆ. ತೀವ್ರ ಸಂಕಷ್ಟದಲ್ಲಿದ್ದ ಇಕ್ಬಾಲ್ ಅವರ  ಪರಿಸ್ಥಿತಿಯನ್ನರಿತ  ಕೆ.ಸಿ.ಎಫ್ ತಬೂಕ್ ಸೆಕ್ಟರ್ ಕಾರ್ಯಕರ್ತರು ಅವರ ನೆರವಿಗೆ ಆಗಮಿಸಿದ್ದಾರೆ.
ಕೆಸಿಎಫ್ ತಬೂಕ್ ಸೆಕ್ಟರ್ ನಾಯಕರಾದ ರಝಾಕ್,ಹಮೀದ್ ಮುಸ್ಲಿಯಾರ್, ಹುಸೈನ್, ಹೈದರ್,ಇಕ್ಬಾಲ್ ಮತ್ತಿತರರು ಕಾರ್ಯಕರ್ತರು ಸೇರಿ ಕಫೀಲ್ ನಿಂದ ಸಿಗಬೇಕಾದ ಸಂಬಳ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದು,   ಇಕ್ಬಾಲ್ ರನ್ನು ಅವರು ಊರಿಗೆ ಕಳುಹಿಸಲು ಸಹಕರಿಸಿದ್ದಾರೆ.
ವರದಿ : ಶುಕೂರ್ ನಾಳ
error: Content is protected !!
%d bloggers like this:
Inline
Inline