ಗುಜರಾತ್ : ಬಿಜೆಪಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಪಾಟೀದಾರ್ ಪ್ರತಿಭಟನೆಯ ಬಿಸಿ! ಬಿಜೆಪಿಗರನ್ನು ಚಿಂತೆಗೀಡು ಮಾಡುವ ವೀಡಿಯೋ!

ವರದಿಗಾರ : ಬಿಜೆಪಿಯನ್ನು ಸಂತೃಪ್ತಿಪಡಿಸುವ ನಿಟ್ಟಿನಲ್ಲಿ ಕೆಲ ಮಾಧ್ಯಮಗಳ ಚುನಾವಣಾ ಸಮೀಕ್ಷೆಗಳೇನೇ ಇದ್ದರೂ ಇದೀಗ ಹೊರಬಂದಿರುವ ವೀಡಿಯೋ ಒಂದು ಗುಜರಾತಿನ ನೈಜ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುವುದರ ಕುರಿತು ಬೆಳಕು ಚೆಲ್ಲುತ್ತದೆ.

ಕಳೆದ ಇಪ್ಪತ್ತೆರಡು ವರ್ಷಗಳಿಂದ ಬಿಜೆಪಿಗೆ ಬೆಂಬಲ ನೀಡುತ್ತಾ ರಾಜ್ಯದಲ್ಲಿ ಅಧಿಕಾರಕ್ಕೇರಲು ಸಹಾಯ ಮಾಡಿದ್ದರೂ, ತಮ್ಮ ಸಮುದಾಯಕ್ಕೆ ಪಕ್ಷ ಮಾಡಿರುವ ಮೋಸದಿಂದ ರೊಚ್ಚಿಗೆದ್ದಿರುವ ಪಟೇಲ್ ಸಮುದಾಯ ಗುಜರಾತಿನಲ್ಲಿ ಬಿಜೆಪಿಯನ್ನು ಬೆಂಬಿಡದೆ ಕಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಬಿಜೆಪಿಯ ಚುನಾವಣಾ ಪ್ರಚಾರಕರು ಮನೆ ಮನೆ ಭೇಟಿ ನೀಡುವಾಗಲೆಲ್ಲಾ ಅವರನ್ನು ಹಿಂಬಾಲಿಸುತ್ತಾ ಬಿಜೆಪಿಯನ್ನು ವಿರೋಧಿಸುವಂತೆ ಜನರಿಗೆ ಕರೆ ಕೊಡುತ್ತಾ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇದರ ಕುರಿತು ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಮುಖ್ಯ ವಾಹಿನಿಯ ಮಾಧ್ಯಮಗಳು ಇದನ್ನು ಜನರಿಂದ ಮುಚ್ಚಿಡುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

 

ವೀಡೀಯೋದಲ್ಲಿ ಬಿಜೆಪಿಗರು ಪ್ರಚಾರಕ್ಕೆ ಹೋದಲ್ಲೆಲ್ಲಾ ಪಾಟಿದಾರ್ ಚಳವಳಿಯ ಕಾರ್ಯಕರ್ತರು, “ಸರ್ದಾರ್ ಲಡೇ ತೆ ಗೋರೋಂ ಸೆ, ಹಂ ಲಡೇಂಗೇ ಚೋರೋಂ ಸೇ..ಭಾಗ್ ರೇ  ಬಿಜೆಪಿ ಭಾಗ್ ಭಾಗ್”. (ಸರ್ದಾರ್ ಪಟೇಲರು ಅಂದು ಬಿಳಿಯರೊಂದಿಗೆ ಯುದ್ಧ ಮಾಡಿದ್ದರು, ನಾವಿಂದು ಕಳ್ಳರೊಂದಿಗೆ ಯುದ್ಧ ಮಾಡಬೇಕಾಗಿದೆ. ಬಿಜೆಪಿಯವರೇ ತೊಲಗಿ ) ಎಂಬ ಘೋಷಣೆಗಳೊಂದಿಗೆ ಬಿಜೆಪಿಗರ ಹುಮ್ಮಸ್ಸಿಗೆ ತಣ್ಣೀರೆರಚುತ್ತಿದ್ದಾರೆ. ಈ ದೃಶ್ಯಗಳು ಸಾಮಾಜಿಕ ತಾಣ ಟ್ವಿಟ್ಟರ್’ನಲ್ಲಿ ಈಗ ಹರಿದಾಡುತ್ತಾ ಇದೆ.

error: Content is protected !!
%d bloggers like this:
Inline
Inline