ರಾಷ್ಟ್ರೀಯ ಸುದ್ದಿ

ಮ್ಯಾನ್ಮಾರ್ ಹಾಗೂ ಉತ್ತರ ಕೊರಿಯಾಕ್ಕಿಂತಲೂ ಹೆಚ್ಚು ಅಪೌಷ್ಟಿಕತೆ ಭಾರತದಲ್ಲಿ!!!

ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತವು ಕಳೆದ ತಿಂಗಳು ಬಿಡುಗಡೆಗೊಂಡ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ 119 ರಾಷ್ಟ್ರಗಳ ಪೈಕಿ 100ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ 118 ರಾಷ್ಟ್ರಗಳ ಪೈಕಿ 97ನೇ ಸ್ಥಾನವನ್ನು ಪಡೆದಿತ್ತು. ಕಳಪೆ ಸ್ಥಾನವು ಹೆಚ್ಚಾಗಿರುವ ಹಸಿವು ಹಾಗೂ ಅಪೌಷ್ಟಿಕತೆಯ ಪ್ರಮಾಣವನ್ನು ಪ್ರತಿನಿಧಿಸುತ್ತದೆ.

2017 ರ ಜಾಗತಿಕ ಹಸಿವು ಸೂಚ್ಯಂಕ ದಲ್ಲಿ ಏಷ್ಯಾದ ಕೇವಲ ಎರಡು ರಾಷ್ಟ್ರಗಳು ಭಾರತದ ಹಿಂದೆ ಇವೆ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ!!

ಬಡತನ ಎಂದು ಕೇಳಿದಾಗ ನಮ್ಮಲ್ಲಿ ಹಲವರು ನೆನಪಿಸುವ ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳೂ ಈ ಪಟ್ಟಿಯಲ್ಲಿ ಭಾರತಕ್ಕಿಂತ ಉತ್ತಮ ಅಂಕವನ್ನು ಪಡೆದಿದೆ. ಯುದ್ಧ, ಭಯೋತ್ಪಾದನೆಯಿಂದ ತತ್ತರಿಸಿರುವ ಇರಾಕ್ 78ನೆಯ ಸ್ಥಾನವನ್ನು ಪಡೆದಿದೆ.

ಭಾರತದ ಜನಸಂಖ್ಯೆಯ 14.5% ಜನರು ಅಪೌಷ್ಟಿಕರಾಗಿದ್ದಾರೆ. ಆದರೆ ಎರಡು ದಶಕಗಳ ಹಿಂದೆ ಕಣ್ಣಾಡಿಸಿದರೆ ಭಾರತವೂ ನಿಧಾನವಾಗಿ ಸಮಸ್ಯೆಯನ್ನು ಬಗೆಹರಿಸುತ್ತಿದೆ ಎನ್ನಬಹುದು. 1992ರಲ್ಲಿ ದೇಶದ ಜನಸಂಖ್ಯೆಯ 21.7% ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಭಾರತವು 2022ರ ವರೆಗೆ ಅಪೌಷ್ಟಿಕತೆ ಮುಕ್ತ ರಾಷ್ಟ್ರವಾಗುವ ಪ್ರಯತ್ನದಲ್ಲಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group