ವಿದೇಶ ಸುದ್ದಿ

ಕೊಲೊರಾಡೋ ವಾಲ್ಮಾರ್ಟ್ ಶೂಟೌಟ್: ಬೈಬಲ್ ಭಂಡಾರದೊಂದಿಗೆ ಏಕಾಂಗಿ ಜೀವನ ನಡೆಸುತ್ತಿದ್ದ ಭಯೋತ್ಪಾದಕ!!

ಕೊಲೊರಾಡೋ ವಾಲ್ಮಾರ್ಟ್ ಶೂಟೌಟ್ ನಡೆಯುವುದಕ್ಕಿಂತ ನಿಮಿಷಗಳ ಮುನ್ನ ಭಯೋತ್ಪಾದಕ ಸ್ಕಾಟ್ ಓಸ್ಟ್ರೇಮ್ ದಾರಿಬಿಡುವಂತೆ ಕೋಪದಿಂದ ಒದರಿಕೊಂಡು ತನ್ನ ಮನೆಯಿಂದ ಹೊರಬಂದು ಕಾರಿನಲ್ಲಿ ಹೋದದ್ದನ್ನು ಇಂದಿಗೂ ಆತನ ನೆರೆಯವರು ನೆನಪಿಸುತ್ತಿದ್ದಾರೆ.

ಅತನ ನೆರೆಮನೆಯವರ ಪ್ರಕಾರ ಓಸ್ಟ್ರೇಮ್ ಯಾವತ್ತೂ ಕೋಪದಿಂದಿರುವ ವ್ಯಕ್ತಿ ಹಾಗೂ ಪೀಠೋಪಕರಣಗಳಿಲ್ಲದ ತನ್ನ ಮನೆಯಲ್ಲಿ ಬೈಬಲ್ ಭಂಡಾರದೊಂದಿಗೆ ಏಕಾಂಗಿ ಜೀವನ ನಡೆಸುತ್ತಿದ್ದನು.

ಎರಡು ವರ್ಷಗಳಿಂದ ಆತನ ಮನೆಯಿರುವ ಕಟ್ಟಡದ ಕೆಳಗಿನ ಮಹಡಿಯಲ್ಲಿ ವಾಸಿಸುತ್ತಿರುವ ಮುನಿಝ್ ಎಂಬ ಮಹಿಳೆಯ ಪ್ರಕಾರ, ಆಕೆ ಈ ಕಳೆದ ಎರಡು ವರ್ಷಗಳಲ್ಲಿ ಕೋಪದಿಂದಿರುವ ಓಸ್ಟ್ರೇಮ್ ನನ್ನು ಮಾತ್ರ ಕಂಡಿರುವುದು. ಆತನು ತನ್ನ ನೆರೆಮನೆಯವರಲ್ಲಿ ಬಿಳಿಯರಲ್ಲಿ ಮಾತ್ರ ಮಾತನಾಡುತ್ತಿದ್ದನು.

ಇನ್ನೋರ್ವ ನೆರೆಯವನ ಪ್ರಕಾರ, ಆತನ ಮನೆಯಲ್ಲಿ ಟಿವಿ, ಒಂದು ಕುರ್ಚಿ ಹಾಗೂ ಒಂದು ಮೇಜಿಯನ್ನು ಬಿಟ್ಟರೆ ಯಾವುದೇ ಪೀಠೋಪಕರಣಗಳಿರಲಿಲ್ಲ. ಮೇಜಿನ ಮೇಲೆ ಹಾಗೂ ಕೆಳಗೆ ಬೈಬಲ್ ಗ್ರಂಥಗಳಿದ್ದವು.

ನವೆಂಬರ್ 1ರಂದು ನಡೆದ ಶೂಟೌಟ್ ನಲ್ಲಿ ಮೂವರು ಬಲಿಯಾಗಿದ್ದರು.

To Top
error: Content is protected !!
WhatsApp chat Join our WhatsApp group