ಆರೆಸ್ಸೆಸ್ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ತಯಾರಿಕೆ ಸಂದರ್ಭ ಸ್ಪೋಟ

▪ಕ್ಷಣದಲ್ಲೆ ಆರೋಪಿಗಳು ಪರಾರಿ

▪ಕಳೆದ ವರ್ಷ ಇದೇ ಪರಿಸರದಲ್ಲಿ ನಡೆದಿದ್ದ ಸ್ಪೋಟದಲ್ಲಿ ಬಿಜೆಪಿ ಕಾರ್ಯಕರ್ತ ಸಾವು

ವರದಿಗಾರ: ಕೇರಳ ಕಣ್ಣೂರಿನ ಕೂತುಪರಂಬ ಪ್ರದೇಶದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಕಾರ್ಯಕರ್ತನ ಮನೆಯಲ್ಲಿ ಬಾಂಬ್ ತಯಾರಿಕೆಯ ಸಂದರ್ಭದಲ್ಲಿ ಸ್ಪೋಟಗೊಂಡು ಮನೆಗೆ ಹಾನಿಯಾಗಿರುವುದು ವರದಿಯಾಗಿದೆ.

ವಲಯಂಗದನ್ ರಘು ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಕಾರ್ಯಕರ್ತನ ಮನೆಯ ಕೋಣೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಸ್ಥಳದಲ್ಲಿ ಅರ್ಧ ಕಿ.ಗ್ರಾಂ ಗನ್ ಪೌಡರ್ ಪತ್ತೆ ಹಚ್ಚಿದ್ದು, ಬಾಂಬ್ ತಯಾರಿ ಸಂದರ್ಭ ಸ್ಫೋಟ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಂಬ್ ಸ್ಪೋಟಗೊಂಡ ಕ್ಷಣದಲ್ಲೇ ಆರೆಸ್ಸೆಸ್ ಕಾರ್ಯಕರ್ತ ರಘು ಮತ್ತು ಆತನ ಮಗ ಪರಾರಿಯಾಗಿದ್ದು, ನಾಪತ್ತೆಯಾಗಿದ್ದಾರೆ.

ಕಳೆದ ವರ್ಷ ಇದೇ ಪರಿಸರದ ಕೊಟ್ಟಾಯಂಪೊಯಿಲ್ ಎಂಬಲ್ಲಿ ಆರೆಸ್ಸೆಸ್ ನ ರಾಜಕೀಯ ಮುಖ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ಸ್ಪೋಟಗೊಂಡು ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದರು.

error: Content is protected !!
%d bloggers like this:
Inline
Inline