ರೈಲ್ವೇ ಟಿಕೇಟ್ ಪಡೆಯದೆ ಎಬಿವಿಪಿಯವರ ಕೇರಳ ಯಾತ್ರೆ ; ಕಾನೂನು ಭಂಜಕರಿಗೆ ಪಾಠ ಕಲಿಸಿದ ಕೇರಳ ಪೊಲೀಸ್

ಕೇರಳದಲ್ಲಿ ಎಡಪಂಥೀಯರಿಂದ ಹಿಂದೂ ವಿರೋಧಿ ಹಿಂಸೆ ನಡೆಯುತ್ತಿದೆಯೆಂದು ಆರೋಪಿಸಿ ಅದರ ವಿರುದ್ಧ ಪ್ರತಿಭಟಿಸಲು ಎಬಿವಿಪಿ ‘ಚಲೋ ಕೇರಳ’ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಮಧ್ಯ ಪ್ರದೇಶದಿಂದಾಗಮಿಸಿದ ಎಬಿವಿಪಿ ಕಾರ್ಯಕರ್ತರು ಟಿಕೆಟ್ ರಹಿತ ಪ್ರಯಾಣ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಇಂದೋರ್-ಕೊಚುವೇಲಿ ರೈಲಿನ ಜನರಲ್ ಕಂಪಾರ್ಟ್ಮೆಂಟ್ ನಲ್ಲಿ ಟಿಕೆಟಿಲ್ಲದೆ ಪ್ರಯಾಣಿಸಿದ ಎಬಿವಿಪಿ ಕಾರ್ಯಕರ್ತರು ಇತರ ಯಾರಿಗೂ ತಾವಿರುವ ಕಂಪಾರ್ಟ್ಮೆಂಟ್ ಏರಲು ಅನುಮತಿ ನೀಡಿಲ್ಲ ಎನ್ನಲಾಗಿದೆ. ತಾವು ಕಂಪಾರ್ಟ್ಮೆಂಟ್ ಕಾಯ್ದಿರಿಸಿದ್ದೇವೆಂದು ಹೇಳಿ ಬಾಗಿಲು ತೆರೆಯದೆ ಒಳಗಿನಿಂದ ಭದ್ರಪಡಿಸಿದ್ದರು. ಕೇರಳದ ಕಣ್ಣೂರು ತಲುಪುವವರೆಗೂ ಈ ಕಾನೂನು ಬಾಹಿರ ಯಾತ್ರೆ ಕೈಗೊಂಡವರಿಗೆ ಯಾವುದೇ ತೊಂದರೆಯುಂಟಾಗಲಿಲ್ಲ. ಆದರೆ ಕಣ್ಣೂರಿನ ಜನರು ಇದನ್ನು ಸಹಿಸಲಿಲ್ಲ. ಎಬಿವಿಪಿ ಕಾರ್ಯಕರ್ತರ ವರ್ತನೆಯ ವಿರುದ್ಧ ಪ್ರತಿಭಟಿಸಿದ ಕಣ್ಣೂರಿನ ಜನತೆ ದೂರು ದಾಖಲಿಸಿದರು. ಮುಂದಿನ ನಿಲ್ದಾಣವಾದ ಕೋಝಿಕ್ಕೋಡ್ ನಲ್ಲಿ ಪೊಲೀಸರು ಹಾಗೂ ರೈಲ್ವೇ ಅಧಿಕಾರಿಗಳು ಪರಿಶೀಲಿಸಿದಾಗ ಟಿಕೆಟ್ ರಹಿತ ಯಾತ್ರೆ ಕೈಗೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಕೇರಳದ ರಾಜಧಾನಿ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಟಿಕೆಟ್ ರಹಿತ ಎಬಿವಿಪಿ ಕಾರ್ಯಕರ್ತರನ್ನು ದಂಡ ಪಾವತಿಸಿದ ಬಳಿಕ ಪ್ರಯಾಣ ಮುಂದುವರಿಸಲು ಅನುಮತಿಸಲಾಯಿತು.

ಇಲ್ಲಿನ ರಾಜಕೀಯ ಪರಿಸ್ಥಿಯನ್ನು ತಿಳಿಯಲು ಕೇರಳಕ್ಕಾಗಮಿಸಿದ ಎಬಿವಿಪಿ ಕಾರ್ಯಕರ್ತರನ್ನು ಟಿಕೆಟ್ ರಹಿತ ಪ್ರಯಾಣವು ಅಪರಾಧವೆಂಬ ಪ್ರಮುಖ ಪಾಠದ ಮೂಲಕ ಕೇರಳೀಯರು ಸ್ವಾಗತಿಸಿದ್ದಾರೆ.

error: Content is protected !!
%d bloggers like this:
Inline
Inline