ಕಾಂಗ್ರೆಸ್, ಮುಸ್ಲಿಂ ಮಹಿಳೆಯರನ್ನು ಸೂಳೆಗಾರಿಕೆಗೆ ತಳ್ಳುತ್ತಿದೆ; ಬಿಜೆಪಿ ನಾಯಕನ ಬೇಜವಾಬ್ದಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ

ವರದಿಗಾರ: ರಾಜ್ಯ ಸುದ್ದಿ ವಾಹಿನಿ ಟಿವಿ9 ಬುಧವಾರ ಸಂಜೆ 7ಕ್ಕೆ ನಡೆಸಿದ ‘ಮಿಷನ್ ಮುಸ್ಲಿಂ ಓಟ್ ಬ್ಯಾಂಕ್’ ಚರ್ಚಾ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಜ್ಯ ವಕ್ತಾರ ಗೋ.ಮಧುಸೂಧನ್ ಅತ್ಯಂತ ನೀಚ ಮಟ್ಟದ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಗೋ.ಮಧುಸೂಧನ್  ಚರ್ಚೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವು ಹೈದರಾಬಾದಿನಲ್ಲಿ ಮುಸ್ಲಿಂ ಮಹಿಳೆಯರನ್ನು ಸೂಳೆಗಾರಿಕೆಗೆ ಇಳಿಸುತ್ತಿದೆ ಮತ್ತು ಸೌದಿ ಅರೇಬಿಯಾದಿಂದ ಬರುವ ಶೇಖ್ ಗಳಿಗೆ 16 ವರ್ಷದ ಹೆಣ್ಣು ಮಕ್ಕಳನ್ನು ನೀಡುತ್ತಿದ್ದಾರೆ ಎಂಬ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ.

ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿಕೆಯನ್ನು ಖಂಡಿಸಿದ್ದು,  ಹೇಳಿಕೆ ಹಿಂಪಡೆಯಲು ಆಗ್ರಹಿಸಿದ್ದಾರೆ ಮತ್ತು ನಾಲಗೆಯನ್ನು ಹಿಡಿತದಲ್ಲಿಡಿ ಎಂಬ ಎಚ್ಚರಿಕೆಯನ್ನು ನೀಡಿದರು.

ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಎಸ್. ಉಗ್ರಪ್ಪ ಪ್ರತಿಕ್ರಿಯಿಸಿ, ನಿಮ್ಮ ಮನೋಸ್ಥಿತಿ ಯಾವ ರೀತಿಯದ್ದು ಎಂಬುವುದು ಇದರಲ್ಲೇ ತಿಳಿದು ಬರುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಗೌರವ  ಇಲ್ಲದೆ, ಮನು ಧರ್ಮದ ಪ್ರವೃತ್ತಿ ಹೇಗಿದೆ ಎಂಬುವುದಕ್ಕೆ ಇದೇ ಸ್ಪಷ್ಟ ಉದಾಹರಣೆಯಾಗಿದೆ. ನಿಮಗೆ ಮನುಷ್ಯತ್ವ ಅನ್ನುವುದು ಇದೆಯೇ ಎಂದು  ಖಾರವಾಗಿ ಪ್ರಶ್ನಿಸಿದ್ದಾರೆ.

error: Content is protected !!
%d bloggers like this:
Inline
Inline