“ಜೀವನದಲ್ಲಿ ಯಾವತ್ತೂ ಬಿಜೆಪಿಗೆ ಮತ ನೀಡುವುದಿಲ್ಲ” :ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಶಪಥ ಹಾಕಿದ ಸಾವಿರಾರು ಗುಜರಾತಿಗಳು!!

“2017 ಹಾಗೂ 2019ರ ಚುನಾವಣೆಯಲ್ಲಿ ಸರ್ವ ಶಕ್ತಿಯನ್ನು ಉಪಯೋಗಿಸಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ”

ಯುವ ನೇತಾರ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಸಾವಿರಾರು ಜನರು ಬಿಜೆಪಿಯ ವಿರುದ್ಧ ಶಪಥ ಹಾಕುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ, ಪಾಟೀದಾರ್ ವಿರೋಧಿ, ಆದಿವಾಸಿ ವಿರೋಧಿ, ಮುಸ್ಲಿಮ್ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಯುವ ವಿರೋಧಿ ಬಿಜೆಪಿಗೆ ಜೀವನದಲ್ಲಿ ಯಾವತ್ತೂ, ಯಾವುದೇ ಸನ್ನಿವೇಶದಲ್ಲೂ ಮತ ನೀಡುವುದಿಲ್ಲವೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಗುಜರಾತಿನ ಸುರೇಂದ್ರ ನಗರ ಜಿಲ್ಲೆಯ ದಲಿತರು ಬಿಜೆಪಿ ವಿರುದ್ಧ ಪ್ರತಿಜ್ಞೆ ಕೈಗೊಂಡಿದ್ದಾರೆ.

error: Content is protected !!
%d bloggers like this:
Inline
Inline