ಸುತ್ತ-ಮುತ್ತ

SDPI ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ವತಿಯಿಂದ ಅನಾಣ್ಯೀಕರಣ ವಿರೋಧಿಸಿ ‘ಕರಾಳ ದಿನ’ ಆಚರಣೆ

ವರದಿಗಾರ : ಎಸ್ ಡಿ ಪಿ ಐ ಮೂಲ್ಕಿ – ಮೂಡಬಿದ್ರೆ ಕ್ಷೇತ್ರದ ವತಿಯಿಂದ ಇಂದು ಮುಲ್ಕಿಯಲ್ಲಿ, ನರೇಂದ್ರ ಮೋದಿಯವರು ಕಳೆದ ವರ್ಷ ನವಂಬರ್ 8 ರಂದು 500 ಮತ್ತು 1000 ದ ನೋಟುಗಳನ್ನು ಏಕಾ ಏಕಿ ರದ್ದುಪಡಿಸಿ ನಡೆಸಿದ್ದ ಜನ ವಿರೋಧಿ ನೋಟು ಅನಾಣ್ಯೀಕರಣ ನೀತಿಯ ವರ್ಷಾಚರಣೆಯನ್ನು ‘ಕರಾಳ ದಿನ’ವನ್ನಾಗಿ ಆಚರಿಸಿ ಪ್ರತಿಭಟನಾ ಸಭೆ ನಡೆಯಿತು.

 

ಸಂಜೆ 5:00ಗಂಟೆಗೆ ಕಾರ್ನಾಡ್ ಸರ್ಕಲ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ನೋಟ್ ಅನಾನ್ಯೀಕರಣ ಮತ್ತು ಕೇಂದ್ರ ಸರಕಾರದ ವಿವಿಧ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನೆ ನಡೆಸಲಾಯಿತು.
ಎಸ್ ಡಿ ಪಿ ಐ ಮೂಡಬಿದ್ರೆ ವಿಧಾನ ಸಭಾ ಸಮಿತಿಯ ಅಧ್ಯಕ್ಷರಾದ ಜಮಾಲ್ ಜೋಕಟ್ಟೆಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಸ್ ಡಿ ಪಿ ಐ ಮುಲ್ಕಿ ವಲಯಾಧ್ಯಕ್ಷರಾದ ಶರೀಫ್ ಮುಲ್ಕಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಬುಬಕ್ಕರ್ ಮುಲ್ಕಿ ಮತ್ತು ನಿಸಾರ್ ಮರವೂರ್, ತೌಸಿಫ್ ಕೊಲ್ನಾಡು, ಮತ್ತಿತರು ಪಾಲ್ಗೊಂಡರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group