ಹೊಸಂಗಡಿ: ಬ್ಲಡ್ ಡೊನರ್ಸ್ ವತಿಯಿಂದ ರಕ್ತದಾನ ಶಿಬಿರ

ವರದಿಗಾರ-ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ತಂಡದ ಮೂರನೇ ವರ್ಷಾಚರಣೆಯ ಪ್ರಚಾರಾರ್ಥವಾಗಿ  ಹೊಸಂಗಡಿ ದಾರೂಲ್ ಉಲೂಮ್ ಮದ್ರಸ ದುರ್ಗಿಪಲ್ಲ ವಠಾರದಲ್ಲಿ  ಬ್ಲಡ್ ಡೋನರ್ಸ್ ಮಂಗಳೂರು  ಹಾಗೂ  ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್  ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾರುಲ್ ಉಲೂಮ್ ಮದರಸ ಅಧ್ಯಕ್ಷ ತಲಕ್ಕರ ಮೊಯಿದಿನ್ ಹಾಜಿ, ಹೊಸಂಗಡಿ ಟೌನ್ ಮಸ್ಜಿದ್ ಅಧ್ಯಕ್ಷ ಯಾಫ್ಕೋ  ಹಮೀದ್ ಹಾಜಿ, ವರ್ಕಾಡಿ ರೇಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಮಂಜೇಶ್ವರ ಪಂಚಾಯತ್ ಸದಸ್ಯ ಬಷೀರ್ ಕಾಣಿಲ, ದಾರುಲ್ ಉಲೂಮ್ ಮದರಸ ಕಾರ್ಯದರ್ಶಿ ಖಾಲಿದ್ , ಉಸ್ತಾದ್  ಎನ್. ಎಂ. ಅಬ್ದುಲ್ಲ ಮದನಿ, ದುರ್ಗಿಪಲ್ಲ ಮಸೀದಿ ಖತೀಬರಾದ ಮಹಮೂದ್ ಮುಸ್ಲಿಯಾರ್ ,ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಅಡ್ಮಿನ್ಗಳಾದ  ಮುಸ್ತಾಫಾ ಕೆ ಸಿ ರೋಡ್, ಇರ್ಷಾದ್ ಉಚ್ಚಿಲ, ಮುನೀರ್ ಚೆಂಬುಗುಡ್ಡೆ, ಸಲಾಂ ಚೆಂಬುಗುಡ್ಡೆ ಸದಸ್ಯರಾದ ಶೆಹಬಾಜ್ ಮೊಯಿದಿನ್ ಯಾಫ್ಕೋ, ರಫೀಕ್ ಪೀರಾರಮೂಲ, ರಜಾಕ್ ಆಚಾರಿಮೂಲ, ಕುಂಚಿಮೋನು  ಉಪಸ್ಥಿತರಿದ್ದರು
ಊರಿನ ಹಲವು ಗಣ್ಯರು , ನಾಗರಿಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿದರು, ಸುಮಾರು ೭೦ಕ್ಕೊ  ಅಧಿಕ  ಯೂನಿಟ್ ರಕ್ತವನ್ನು ಶಿಬಿರದಲ್ಲಿ ಸಂಗ್ರಹಿಸಲಾಯಿತು
Report: Shahul Hameed Kashipatna
error: Content is protected !!
%d bloggers like this:
Inline
Inline