ಜಿ ಎಸ್ ಟಿ ಅನ್ನು ಗ್ರೇಟ್ ಸೆಲ್ಪಿಶ್ ಟ್ಯಾಕ್ಸ್ ಎಂದು ಕರೆದ ಮಮತಾ ಬ್ಯಾನರ್ಜಿ

ವರದಿಗಾರ: ಜಿಎಸ್‍ಟಿ ಎಂದರೆ ಜನರಿಗೆ ಕಿರುಕುಳ ನೀಡುವ ಮತ್ತು ಆರ್ಥಿಕತೆಯನ್ನು ನಾಶಗೊಳಿಸುವ ‘ಗ್ರೇಟ್ ಸೆಲ್ಪಿಶ್ ಟ್ಯಾಕ್ಸ್’ (ಮಹಾ ಸ್ವಾರ್ಥದ ತೆರಿಗೆ) ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸರಕು ಮತ್ತು ಸೇವಾ ತೆರಿಗೆಯನ್ನು ವಿರೋಧಿಸುತ್ತಾ ಅವರು ಈ ರೀತಿಯಲ್ಲಿ ಕರೆದಿದ್ದಾರೆ.

ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಒಂದು ದೊಡ್ಡ ದುರಂತ ಎಂದು ಕೇಂದ್ರದ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ, ಇದರ ವಿರುದ್ಧ ನವೆಂಬರ್ 8ರಂದು ನಡೆಯಲಿರುವ ದೇಶವ್ಯಾಪಿ ಆಂದೋಲನದ ಹಿನ್ನೆಲೆಯಲ್ಲಿ, ತಮ್ಮ ವಿವರಗಳಿರುವ ಚಿತ್ರಗಳಿಗೆ ಕಪ್ಪು ಚೌಕಾ ಹಾಕುವ ಮೂಲಕ ಪ್ರತಿಭಟನೆ ಸಲ್ಲಿಸಬೇಕು ಎಂದು ಟ್ವೀಟರ್‍ನಲ್ಲಿ ಅವರು ಕರೆ ನೀಡಿದ್ದಾರೆ.

error: Content is protected !!
%d bloggers like this:
Inline
Inline