ಕುದುರೆಯ ಮೇಲೇರಿ, ಡೋಲು ತಂಡದೊಂದಿಗೆ iPhone X ಖರೀದಿಸಲು ಬಂದ ಮುಂಬೈ ಯುವಕ!!

ಐಷಾರಾಮದ ಚಿಹ್ನೆಯಾದ ಐಫೋನ್ ಬಗ್ಗೆ ಹಲವಾರು ಹಾಸ್ಯಗಳನ್ನು ಕೇಳಿದ್ದೇವೆ. ತಮಾಷೆಗೆ ನಮ್ಮಲ್ಲಿ ಹಲವರು “ಐಫೋನ್ ಖರೀದಿಸಲು ಕಿಡ್ನಿ ಮಾರಾಟ ಮಾಡಬೇಕು” ಎಂದು ಹೇಳಿ ಅಥವಾ ಕೇಳಿ ನಕ್ಕಿದ್ದೇವೆ. ಆದರೆ ಮುಂಬೈಯ ಉಪನಗರಿ ಥಾಣೆಯಲ್ಲಿ ನಿನ್ನೆ ವಿಚಿತ್ರ ಘಟನೆಯೊಂದು ನಡೆಯಿತು. ಯುವಕನೊರ್ವನು ಐಫೋನ್ ನ ಹೊಸ ಮಾದರಿಯಾದ iPhone X ಖರೀದಿಸಲು ಡೋಲು ವಾದ್ಯಗಳೊಂದಿಗೆ ಕುದುರೆ ಸವಾರಿ ನಡೆಸಿ ಬಂದದ್ದು ಎಲ್ಲರ ಗಮನ ಸೆಳೆಯಿತು.

ಐಫೋನ್ ಪ್ರೇಮಿಯಾದ ಪಲ್ಲಿವಾಲ್, ಥಾಣೆಯ ಹರಿನಿವಾಸ್ ಸರ್ಕಲ್ ನಲ್ಲಿರುವ ಅಂಗಡಿಯೊಂದರಿಂದ ಮುಂಗಡವಾಗಿ ಕಾಯ್ದಿರಿಸಿದ ಐಫೋನನ್ನು ಕುದುರೆಯ ಮೇಲೆ ಕುಳಿತುಕೊಂಡೇ ಪಡೆದನು.

 

iPhone X ರ ಬೆಲೆಯು ಭಾರತದಲ್ಲಿ 89000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. 256GBಯ ಮಾಡೆಲ್ 1,02,000 ರೂಪಾಯಿಗಳಿಗೆ ಲಭ್ಯವಿದೆ.

error: Content is protected !!
%d bloggers like this:
Inline
Inline