ರಾಷ್ಟ್ರೀಯ ಸುದ್ದಿ

ಯೋಗಿ ಆದಿತ್ಯನಾಥರ ಮುಂದೆಯೇ ತಲೆ ಕೆಳಗಾಯ್ತು ರಾಷ್ಟ್ರ ಧ್ವಜ !

ವರದಿಗಾರ: ಮಾರಿಷಸ್ ಪ್ರವಾಸದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಮುಂದೆಯೇ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ.

ಯೋಗಿ ಆದಿತ್ಯನಾಥ್ ವಲಸಿಗರ ಘಾಟ್‍ಗೆ ಭೇಟಿ ನೀಡಿದ್ದ ಸಂದರ್ಭ ಯೋಗಿ ಆದಿತ್ಯನಾಥ್ ಕುಳಿತಿದ್ದ ಸ್ಥಳದಲ್ಲಿ ಭಾರತದ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಇರಿಸಲಾಗಿತ್ತು. ಇದೇ ಸಂದರ್ಭ ಪುಸ್ತಕವೊಂದಕ್ಕೆ ಸಹಿಯನ್ನೂ ಯೋಗಿ ಆದಿತ್ಯನಾಥ್ ಹಾಕಿದ್ದಾರೆ ಎನ್ನಲಾಗಿದೆ.

ಅದಲ್ಲದೆ ಯೋಗಿ ಜೊತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಉಪಸ್ಥಿತರಿದ್ದರು. ಆದರೆ ಯಾರೂ ರಾಷ್ಟ್ರಧ್ವಜದ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ.

ಯೋಗಿ ಆದಿತ್ಯನಾಥ್ ಟ್ವಿಟ್ಟರ್ ನ ತನ್ನ ಖಾತೆಯಲ್ಲಿ ಫೋಟೋ ಹಂಚಿದ ಕೆಲ ಕ್ಷಣದಲ್ಲೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಟ್ವಿಟ್ಟರ್ ನಲ್ಲಿ #YogiInsultsNationalFlag ಹ್ಯಾಶ್ ಟ್ಯಾಗ್ ಬಳಸಿ ಹಲವರು ಪ್ರತಿಕ್ರಿಯಿಸಿದ್ದಾರೆ.

 

ಇದೀಗ ತನ್ನ ತಪ್ಪಿನ ಅರಿವಾಗಿ ಯೋಗಿ ತನ್ನ ಟ್ವೀಟ್ ನ್ನು ಅಳಿಸಿ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group