ನವೆಂಬರ್ 5ರಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರ

ವರದಿಗಾರ-ಬಂಟ್ವಾಳ: ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಮಂಗಳೂರು ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ನವೆಂಬರ್ 5 ರಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರವು ಬಿ.ಸಿ.ರೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯಲ್ಲಿ ನಡೆಯಲಿದೆ ಎಂದು ಯು.ಟಿ.ಖಾದರ್ ಅಭಿಮಾನಿಗಳ ಬಳಗ ಅಧ್ಯಕ್ಷ ಆಶಿಕ್ ಕುಕ್ಕಾಜೆ  ಹೇಳಿದ್ದಾರೆ.
 ಅವರು ಇಂದು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಶಿಬಿರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ.ಮಿತ್ತಬೈಲು ಜುಮಾ ಮಸೀದಿ ಖತೀಬರಾದ ಎಂ.ವೈ. ಅಶ್ರಫ್ ಫೈಝಿ ದುವಾ ನೆರವೇರಿಸಲಿದ್ದಾರೆ. ವೆನ್ಲಾಕ್ ಜಿಲ್ಲಾಸ್ಪತ್ರೆಯ ಯುನಾನಿ ವೈದ್ಯರಾದ ಡಾ. ಸಯ್ಯದ್ ಝಾಹಿದ್ ಹುಸೈನ್ ಹಿಜಾಮ ಶಿಬಿರ ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೇರು ಅಭಿವೃಧ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್. ಖಾದರ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಬಿ.ಎ. ಮಹಮ್ಮದಾಲಿ ಕಮ್ಮರಡಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾದ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾದ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷರಾದ ಸದಾಶಿವ ಬಂಗೇರ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.
ಸಮಾಜಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಕೊಡಂಗೆ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಅಧ್ಯಕ್ಷ ರಿಯಾಝ್ ಜವಾನ್, ಸದಸ್ಯರಾದ ಸತ್ತಾರ್ ನಂದರಬೆಟ್ಟು, ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ, ಯೂನುಸ್ ನೌಫಲ್ ಬಂಟ್ವಾಳ ಉಪಸ್ಥಿತರಿದ್ದರು.
ಹಿಜಾಮ ಎಂದರೇನು?
ಹಿಜಾಮ ಯುನಾನಿ ವೈದ್ಯ ಪದ್ದತಿಯ ಚಿಕಿತ್ಸೆ. ಇದೊಂದು ಅರೇಬಿಕ್ ಪದ. ಹಿಜಮ್ ಎಂದರೆ ಸೆಳೆದುಕೊಳ್ಳುವುದು. ಈ ವಿಧಾನದಿಂದ ಮನುಷ್ಯನ ದೇಹದಲ್ಲಿರುವ ನಿರ್ಧಿಷ್ಟ  ಬಿಂದುಗಳನ್ನು ಕೇಂದ್ರೀಕರಿಸಿ ಕೆಟ್ಟ ರಕ್ತಕಣಗಳು ಹಾಗೂ ನಿರುಪಯುಕ್ತ ತ್ಯಾಜ್ಯಗಳನ್ನು ದೇಹದ ಮೇಲೈಗೆ ಸೆಳೆದು ಸಣ್ಣ ಸಣ್ಣ ರಂಧ್ರಗಳ ಮೂಲಕ ನೋವಾಗದಂತೆ ಹೊರಗೆ ತೆಗೆಯಲಾಗುತ್ತದೆ. ಇಪ್ಪತ್ತೊಂದನೇ ಶತಮಾನದಲ್ಲಿ ಯುನಾನಿ ಚಿಕಿತ್ಸಾ ವಿಧಾನವು ಹೆಚ್ಚು ಪ್ರಭಾವಿ ಚಿಕಿತ್ಸೆಯಾಗಿ ಮಾರ್ಪಟ್ಟಿದೆ. ಇದರಲ್ಲೂ ಹಿಜಾಮ (ಕಪ್ಪಿಂಗ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವಪೂರ್ಣವಾಗುತ್ತಿದೆ. ಔಷಧಿಯ ಲೋಕದಲ್ಲಿ ಯುನಾನಿ ಚಿಕಿತ್ಸಾ ವಿಧಾನವು ಆರೋಗ್ಯಕ್ಕೆ ಬಹಳ ಪ್ರಯೋಜನಾಕಾರಿಯಾಗಿದೆ.
error: Content is protected !!
%d bloggers like this:
Inline
Inline