ಜಿಲ್ಲಾ ಸುದ್ದಿ

ಪ್ರಗತಿಪರ ಹೋರಾಟಗಾರರಾದ ಲಕ್ಷ್ಮಣ್ ರವರ ಅಕಾಲಿಕ ನಿಧನ ಶೋಷಿತರಿಗೆ ತುಂಬಲಾರದ ನಷ್ಟ- ಅಬ್ದುಲ್ ಹನ್ನಾನ್

ವರದಿಗಾರ : ದಲಿತ ಕವಿ, ಪ್ರಗತಿಪರ ಹೋರಾಟಗಾರ ಹಾಗೂ ಜಾತಿ ವಿನಾಶ ವೇದಿಕೆಯ ರಾಜ್ಯಧ್ಯಕ್ಷರಾದ ಲಕ್ಷ್ಮಣ್ ರವರು ಇಡೀ ಕರ್ನಾಟಕ ರಾಜ್ಯದಾದ್ಯಂತ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಪಾಲುಗೊಂಡು ಶೋಷಿತರಿಗೆ ಒಂದು ಆಶಾಕಿರಣವಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದರು. ಅಂತಹ ಮಹಾನ್ ಸಮಾಜ ಪರ ಚಿಂತಕ ಲಕ್ಷ್ಮಣ್ ರವರ ಅಕಾಲಿಕ ನಿಧನ, ವಿಶೇಷವಾಗಿ ಶೋಷಿತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಅಂತಿಮ ದರ್ಶನವನ್ನು ಪಡೆದು ಅಭಿಪ್ರಾಯಿಸಿದ್ದಾರೆ.

ಲಕ್ಷ್ಮಣ್ ರವರು ತಮ್ಮ ಹೋರಾಟದ ಜೀವನದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ತಮ್ಮ ನೇರ ನುಡಿ ಮತ್ತು ಕೃತಿಗಳಿಂದ ದೌರ್ಜನ್ಯವನ್ನು ಖಂಡಿಸಿದಲ್ಲದೇ ರಾಜ್ಯದಾದ್ಯಂತ ಪ್ರವಾಸ ಮಾಡಿ ಶೋಷಿತರಿಗೆ ಆತ್ಮಸ್ತೈರ್ಯ ತುಂಬಿ ಶೋಷಿತರ ಪರ ನಿಲ್ಲುತ್ತಿದರು. ಅವರ ಹೋರಾಟದ ಜೀವನ ಇಂದಿನ ಯುವ ಜನತೆಗೆ ಮಾದರಿಯಾಗಿದೆ. ಅವರು ಹೋರಾಟದ ಬಿಡುವಿನ ಸಮಯದಲ್ಲಿ ಒಬ್ಬ ಬರಹಗಾರರನ್ನಾಗಿ ತಮ್ಮನ್ನು ಗುರುತಿಸಿ ಕೊಂಡಿದ್ದರು. ಕಥ ಸಂಕಲನ, ಜಡಿಮಳೆ, ಬಾಳುವ ತಂಗಿಯರು ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆಯಾಯ ಸಮಯದಲ್ಲಿ ನಡೆಯುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ಘಟನಾವಳಿಗಳಿಗೆ ಅನುಸಾರವಾಗಿ ವಿಷಯಗಳನ್ನು ವಿಶ್ಲೇಷಿಸಿ ಬರೆಯುತ್ತಿದ್ದ ಸತ್ಯ ಭರಿತ ಅಂಕಣಗಳು ಅವರ ಪ್ರಾಮಾಣಿಕ ಹೋರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹನ್ನಾನ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಕ್ರಮ್ ಹಸನ್, ರಿಯಾಜ್ ಪರಂಗಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ಆಜಮ್ ಸಾಬ್ ಹಾಗೂ ಬೆಂಗಳೂರು ಜಿಲ್ಲಾ ನಾಯಕರಾದ ರಾಷೀದ್ ಅಲೀ ರವರು ಹಾಜರಿದ್ದರು.

Most Popular

To Top
error: Content is protected !!