ರಾಜ್ಯ ಸುದ್ದಿ

ಮೋದಿಗೆ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೊ ಸೋಲುವ ಭಯ ಕಾಡುತ್ತಿದೆ-ಜಿ.ಪರಮೇಶ್ವರ್

ವರದಿಗಾರ: ಬಿಜೆಪಿಯು ಕರ್ನಾಟಕದಲ್ಲಿ ಮತ್ತೆಮ್ಮೊ ಸೋಲುವ ಭಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಹೀಗಾಗಿ, ಆದಾಯ ತೆರಿಗೆ ದಾಳಿ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಉಳಿದ ಇಲಾಖೆಗಳಂತೆ ಆದಾಯ ತೆರಿಗೆ ಇಲಾಖೆಯೂ ಪ್ರಧಾನಿ ಕೈಕೆಳಗೆ ಬರುತ್ತದೆ. ದಾಳಿ ಬಗ್ಗೆ ಒಬ್ಬ ಪ್ರಧಾನಿ ಇಲ್ಲಿ ಬಂದು ಮಾತನಾಡುತ್ತಾರೆ ಎಂದರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ. ಅಷ್ಟಕ್ಕೂ ಕರ್ನಾಟಕದಲ್ಲಿ ಮಾತ್ರ ದಾಳಿ ನಡೆದಿದೆಯೇ? ಬೇರೆ ಬೇರೆ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿಲ್ಲವೇ? ಅದನ್ನೇಕೆ ಮೋದಿ ಪ್ರಸ್ತಾಪ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮತ್ತೆ ಗೆಲ್ಲುವ ವಿಶ್ವಾಸ ಕಾಂಗ್ರೆಸ್‌ ಪಕ್ಷಕ್ಕಿದೆ. ಕೆಲಸ ಮಾಡಿದ್ದೇವೆ. ಮುಖ್ಯಮಂತ್ರಿಯವರು ಜನಮೆಚ್ಚುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈಗ ಭಯವಿರುವುದು ಬಿಜೆಪಿಗೆ. ಹೀಗಾಗಿ, ಮತಯಂತ್ರಗಳ ದುರ್ಬಳಕೆಯಲ್ಲಿ ತೊಡಗಿದ್ದಾರೆ ಎಂದು ಇದೇ ಸಂದರ್ಭ ಪರಮೇಶ್ವರ್ ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group