ನಿಮ್ಮ ಬರಹ

ಮಲ್ಗನ್ನಡ: ಅ(ನ)ರ್ಥಗಳು

ವಿಶೇಷ ಬರಹ : ಇಸ್ಮತ್ ಫಜೀರ್

ಮೂಲತಃ ನಾನೋರ್ವ ಬ್ಯಾರಿ ಮಾತೃಭಾಷಿಕ. ಸಾಮಾನ್ಯವಾಗಿ ಬ್ಯಾರಿಗಳಿಗೆ ಸ್ವಲ್ಪಮಟ್ಟಿಗೆ ಮಲಯಾಳಂ ಭಾಷೆಯ ಜ್ಞಾನವಿರುತ್ತದೆ. ನನಗೆ ಎಳವೆಯಲ್ಲಿ ಅಪ್ಪಟ ಮಲಯಾಳಿ ಭಾಷಿಕ ಮದ್ರಸ ಅಧ್ಯಾಪಕರು ಬೋಧಿಸುತ್ತಿದ್ದರು ಮತ್ತು ನನಗೆ ಅನೇಕ ಮಲಯಾಳಿ ಸಹಪಾಠಿಗಳು ನನ್ನ ಕಾಲೇಜು ದಿನಗಳಲ್ಲಿದ್ದರು. ಆದುದರಿಂದ ಸ್ವಲ್ಪ ಸುಲಲಿತ ಎನ್ನುವಷ್ಟರ ಮಟ್ಟಿಗೆ ನಾನು ಮಲಯಾಳಂ ಭಾಷೆಯಲ್ಲಿ ವ್ಯವಹರಿಸಬಲ್ಲೆ ಮತ್ತು ಮಾತನಾಡಬಲ್ಲೆ. ಆದರೆ ಮಲಯಾಳಂ ಓದಲು ಮತ್ತು ಬರೆಯಲು ನನಗೆ ಗೊತ್ತಿಲ್ಲ. ಸಾಹಿತ್ಯ ನನ್ನ ಇಷ್ಟದ ವಿಷಯವಾದುದರಿಂದ ನನ್ನ ಇಷ್ಟದ ಮಲಯಾಳಂ ಸಾಹಿತಿಗಳ ಕೆಲವು ಕೃತಿಗಳ ಕನ್ನಡಾನುವಾದವನ್ನು ಆಗೊಮ್ಮೆ ಈಗೊಮ್ಮೆ ಓದುವ ಅಭ್ಯಾಸವಿರಿಸಿಕೊಂಡಿದ್ದೇನೆ. ಅಂತಹ ಸಂದರ್ಭಗಳಲ್ಲಿ ಕೆಲವು ಅನುವಾದಿತ ಪದಗಳು ನನ್ನನ್ನು ಗೊಂದಲದಲ್ಲಿ ಹಾಕಿದ್ದಿದೆ. ಯಾಕೆಂದರೆ ಕೆಲವು ಮಲಯಾಳಂ ಪದಗಳು ಕನ್ನಡದಲ್ಲೂ ಇವೆ. ಆದರೆ ಅವುಗಳ ಅರ್ಥ ಸಂಪೂರ್ಣ ಭಿನ್ನವಾಗಿರುತ್ತವೆ. ಕೆಲವು ಅನುವಾದಕರು ಅವುಗಳನ್ನು ಮಲಯಾಳಂನಲ್ಲಿ ಇದ್ದಂತೆಯೇ ಕನ್ನಡದಲ್ಲೂ ಬರೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಒಟ್ಟು ವಿಷಯದ ಆಶಯವೇ ಬದಲಾಗಿಬಿಡುತ್ತದೆ. ಮತ್ತೆ ಕೆಲವು ಕನ್ನಡದಲ್ಲಿ ಬಳಕೆಯಲ್ಲಿಲ್ಲದ ಮೇಲ್ನೋಟಕ್ಕೆ ಕನ್ನಡದ ಪದಗಳಂತೆಯೇ ಅನಿಸುವ ಪದಗಳನ್ನೂ ಅನುವಾದಕರು ಮಲಯಾಳಂನಲ್ಲಿದ್ದಂತೆಯೇ ಕನ್ನಡದಲ್ಲಿ ಬಳಸುತ್ತಾರೆ. ಅಂತಹ ಕೆಲವು ಪದಗಳನ್ನು ನನ್ನ ಅಲ್ಪ ಅರಿವಿನ ವ್ಯಾಪ್ತಿಯಲ್ಲಿ ಇಲ್ಲಿ ಅರ್ಥ ಸಹಿತ ಪಟ್ಟಿಮಾಡಿರುವೆ. ಇವು ನನ್ನ ಅರಿವಿಗೆ ಬಂದ ಪದಗಳಷ್ಟೆ. ಇದರಾಚೆಗೂ ಅಂತಹ ಅನೇಕ ಪದಗಳನ್ನು ಅನುವಾದಕರು ಬಳಸುವುದಿದೆ. ಇಂತಹ ತಪ್ಪುಗಳನ್ನು ಕೇವಲ ಉದಯೋನ್ಮುಖ ಅನುವಾದಕರು, ಸಾಹಿತಿಗಳು ಮಾತ್ರ ಮಾಡುತ್ತಿಲ್ಲ. ಕೆಲವು ಹೆಸರಾಂತ, ಪಳಗಿದ ಅನುವಾದಕರು ಮತ್ತು ಸಾಹಿತಿಗಳು ಮಾಡುತ್ತಿರುತ್ತಾರೆ. ಇಂತಹದ್ದೇ ತಪ್ಪುಗಳನ್ನು ಕನ್ನಡದಿಂದ ಮಲಯಾಳಂಗೆ ಅನುವಾದ ಮಾಡುವವರೂ ಮಾಡುತ್ತಾರೆಂದು ನಾನು ಕೇಳಿ ಬಲ್ಲೆ. ಅನುವಾದಕರಿಗೆ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಬಹುದೆಂಬ ನಿರೀಕ್ಷೆಯಿಟ್ಟುಕೊಂಡು ಈ ಪುಟ್ಟ ಅ(ನ)ರ್ಥ ಕೋಶ ಮಾಡಿರುವೆ.

To Top
error: Content is protected !!
WhatsApp chat Join our WhatsApp group