ನನ್ನ ಮಕ್ಕಳಲ್ಲಿ ಧೈರ್ಯದ ದಾರಿ ಆರಿಸಿಕೊಂಡವಳು ಗೌರಿ ಲಂಕೇಶ್: ಇಂದಿರಾ ಲಂಕೇಶ್

ವರದಿಗಾರ: ನನ್ನ ಮೂರು ಮಕ್ಕಳದ್ದೂ ಮೂರು ದಾರಿ. ಆದರೆ, ಧೈರ್ಯದ ದಾರಿ ಆರಿಸಿಕೊಂಡವಳು ಗೌರಿ ಲಂಕೇಶ್ ಎಂದು  ತಾಯಿ ಇಂದಿರಾ ಲಂಕೇಶ್ ಹೇಳಿಕೊಂಡಿದ್ದಾರೆ.

ಅವರು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ ‘ಅಂತರ ಗಂಗೆ’ ಮಹಿಳಾ ಆತ್ಮಕಥನಗಳ ಅವಲೋಕನದ ಚರ್ಚೆಯಲ್ಲಿ ಪತಿ ಪಿ. ಲಂಕೇಶ್‍ ಹಾಗೂ ಮಗಳು ಗೌರಿ ಲಂಕೇಶ್‍ ಅವರನ್ನು ನೆನೆದು ಮಾತನಾಡುತ್ತಿದ್ದರು.

ಲಂಕೇಶ್‍ ವ್ಯವಹಾರದಲ್ಲಿ ಪೆಟ್ಟು ತಿಂದು ಎಚ್ಚೆತ್ತುಕೊಂಡಿದ್ದರು. ಆದರೆ, ಪೆಟ್ಟು ತಿಂದಿದ್ದ ಗೌರಿ ಎಚ್ಚೆತ್ತುಕೊಳ್ಳುವ ಮೊದಲೇ ಅವಳನ್ನು ಇಲ್ಲವಾಗಿಸಿದರು ಎಂದು ಹೇಳುತ್ತಲೇ ತಾಯಿ ಇಂದಿರಾ ಲಂಕೇಶ್‍ ಕಣ್ಣೀರಿಟ್ಟರು.

ಗೌರಿ ಕೆಲವು ವಿಷಯಗಳಲ್ಲಿ ನನಗೆ ತಾಯಿಯಂತೆ ಇದ್ದಳು. ಯಾರನ್ನೂ ನೋಯಿಸದ ಸ್ವಭಾವದ ಅವಳನ್ನು ಯಾರು ಕೊಂದರು, ಯಾಕೆ ಕೊಂದರು ಎಂಬುದು ಗೊತ್ತಾಗಬೇಕೆಂದು ಇದೇ ಸಂದರ್ಭದಲ್ಲಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

error: Content is protected !!
%d bloggers like this:
Inline
Inline