ಅನಿವಾಸಿ ಕನ್ನಡಿಗರ ವಿಶೇಷ

ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ, ಜುಬೈಲ್ ಘಟಕದಿಂದ ಉಚಿತ ವೈದ್ಯಕೀಯ ಶಿಬಿರ

ದಮಾಮ್ : ಇಲ್ಲಿನ ಜುಬೈಲ್ ಕೈಗಾರಿಕಾ ನಗರದಲ್ಲಿರುವ ‘ಜಾಲ್ ಇಂಟರ್ ನ್ಯಾಶನಲ್ ಕಂಪೆನಿಯ ಕಾರ್ಮಿಕರ ಕ್ಯಾಂಪ್ ನಲ್ಲಿ ಶಿಫಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು.

“ಅನಿವಾಸಿ ಭಾರತೀಯರು ಎದುರಿಸುವ ಸಮಸ್ಯೆಗಳಿಗೆ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ನೆರವಾಗುತ್ತಿದೆ : ಇರ್ಶಾದ್ ಬಜ್ಪೆ

ಶಿಬಿರವನ್ನು ಉದ್ಘಾಟಿಸಿದ ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್ಎಫ್) ಜುಬೈಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಬಜ್ಪೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗಾಗಿ ಐಎಸ್ಎಫ್ ನಡೆಸಿರುವ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿವರಿಸಿದರು. ಅಪಘಾತ, ಜೈಲು ಶಿಕ್ಷೆ ಪ್ರಕರಣ, ಕಾರ್ಮಿಕ ಸಮಸ್ಯೆ, ಸಾವು ಪ್ರಕರಣ ಮತ್ತು ರಕ್ತದಾನ ಸೇರಿದಂತೆ ಅನಿವಾಸಿ ಭಾರತೀಯರು ಎದುರಿಸುವ ಸಮಸ್ಯೆಗಳಿಗೆ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಐಎಸ್ಎಫ್ ಪರಿಹರಿಸುತ್ತಿದೆ. ಪ್ರಸಕ್ತ ಚಾಲ್ತಿಯಲ್ಲಿರುವ ಆಮ್ನೆಸ್ಟಿ (ಕ್ಷಮಾದಾನ) ಕಾರ್ಯಕ್ರಮದಲ್ಲಿ ಐಎಸ್ಎಫ್ ಕಾರ್ಯಕರ್ತರು ಸ್ವಯಂಸೇವಕರಾಗಿ ರಾಯಭಾರಿ ಕಚೇರಿಯೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಐಎಸ್ಎಫ್ ನಡೆಸಿದೆ ಎಂದು ಇರ್ಶಾದ್ ವಿವರ ನೀಡಿದರು.

 

ಮುಖ್ಯ ಅತಿಥಿಗಳಾಗಿ ಕಂಪೆನಿಯ ಕ್ಯಾಂಪ್ ಮೇಲ್ವಿಚಾರಕ ರಘುತ್ತಮ್ ರೆಡ್ಡಿ, ಜುಬೈಲ್ ಶಿಫಾ ಮೆಡಿಕಲ್ ನ ವೈದ್ಯ ಝಹೀರ್ ಅಹ್ಮದ್, ಐಎಸ್ಎಫ್ ಉಪಾಧ್ಯಕ್ಷ ಇಬ್ರಾಹೀಮ್, ಶಿಬಿರ ಸಂಯೋಜಕ ಜಮಾಲ್ ಮುಂತಾದವರು ಉಪಸ್ಥಿತರಿದ್ದರು. ಐಎಸ್ಎಫ್ ಜುಬೈಲ್ ಘಟಕ ಅಧ್ಯಕ್ಷರು ಶಮೀರ್ ಸ್ವಾಗತಿಸಿ, ಸಮಿತಿ ಸದಸ್ಯ ಅನೀಸ್ ಧನ್ಯವಾದ ಸಲ್ಲಿಸಿದರು.

ಸುಮಾರು 150 ಮಂದಿ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group