2008ರ ಸುಷ್ಮಾ ಸ್ವರಾಜ್ ಕನ್ನಡ ವೀಡಿಯೋ ಮತ್ತೆ ವೈರಲ್; ಆದರೆ ಈ ಬಾರಿ ಕಾಂಗ್ರೆಸ್ ಸರದಿ !

► ಬೆಲೆಯೇರಿಕೆಯನ್ನು ನಿಯಂತ್ರಿಸಲಾಗದ ಆಡಳಿತ ಪಕ್ಷಕ್ಕೆ ಮತ ನೀಡದಂತೆ ಸುಷ್ಮಾ ಸ್ವರಾಜ್ ರಿಂದ ಕನ್ನಡದಲ್ಲಿ ವಿನಂತಿ!!

ವರದಿಗಾರ : 2008ರ ಕರ್ನಾಟಕ ವಿಧಾನ ಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಕನ್ನಡದಲ್ಲಿ ಮತ ಯಾಚನೆ ಮಾಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದೀಗ ಆ ವೀಡಿಯೋ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ವಿರುದ್ಧವಾಗಿದೆ. ಈ ವೀಡಿಯೋದಲ್ಲಿ ಬಿಜೆಪಿ ನಾಯಕಿಯಾದ ಸುಷ್ಮಾ ಸ್ವರಾಜ್ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದನ್ನು ಖಂಡಿಸಿ ಅಂದಿನ ಕೇಂದ್ರ ಸರಕಾರದ ವಿರುದ್ಧ ವಾಗ್ದ್ಧಾಳಿ ನಡೆಸುತ್ತಾ “ಅಕ್ಕಿ, ಬೇಳೆ, ಎಣ್ಣೆ ಹಾಗೂ ಸಕ್ಕರೆಯ ಬೆಲೆ ಆಕಾಶಕ್ಕೇರಿದೆ. ಮೊದಲು ಹಬ್ಬಗಳು ಬಂತೆಂದರೆ ಖುಷಿಯಾಗುತ್ತಿತ್ತು, ಈಗ ಭಯವಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ಜನಸಮಾನ್ಯರಿಗೆ ಹಲವು ಭರವಸೆಗಳನ್ನು ನೀಡುತ್ತಿದ್ದಾರೆ, ಬಡವರ ಬಗ್ಗೆ ಅಷ್ಟು ಕಾಳಜಿಯಿದ್ದಲ್ಲಿ ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ನಿಮ್ಮದೇ ಪಕ್ಷ ಆಡಳಿತದಲ್ಲಿದೆ, ಇಲ್ಲಿ ತನಕ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸುತ್ತಾರೆ. ನಂತರ ಮತದಾರರಲ್ಲಿ “ನೀವು ಮೂರ್ಖರಾಗಬೇಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ಬಿಜೆಪಿಗೆ ಪೂರ್ಣ ಬಹುಮತ ನೀಡಿ” ಎಂದು ವಿನಂತಿಸುತ್ತಾರೆ. ಇದೀಗ ಇದೇ ವೀಡಿಯೋವನ್ನು ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಾ, ಮೂರು ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿದ್ದೂ ಬಡವರ ಕಲ್ಯಾಣಕ್ಕಾಗಿ ಏನೂ ಮಾಡದ ಬಿಜೆಪಿಯನ್ನು ಸೋಲಿಸಲು ವಿನಂತಿಸುತ್ತಿದ್ದಾರೆ.

 

error: Content is protected !!
%d bloggers like this:
Inline
Inline