ಗುಜರಾತ್ : ರಾಹುಲ್ ಗಾಂಧಿ ರ‍್ಯಾಲಿಗೆ ಹಣ ಕೊಟ್ಟು ಜನ ಕರೆ ತರಲಾಗಿತ್ತೇ? ವೈರಲ್ ವೀಡಿಯೋದ ಅಸಲಿಯತ್ತೇನು ?

ವರದಿಗಾರ :  ಕಳೆದ 22 ವರ್ಷಗಳಿಂದ ಗುಜರಾತಿನಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತನ್ನ ಕೈಯಿಂದ ಜಾರುತ್ತಿರುವ ಮತದಾರ ಕಾಂಗ್ರೆಸ್ ಪಾಳಯದ ಕಡೆ ಮುಖ ಮಾಡಿರುವ ಕುರಿತು ಚಿಂತಿತರಾಗಿರುವಂತೆಯೇ, ಬಿಜೆಪಿಯ ಸಾಮಾಜಿಕ ತಾಣಗಳು ರಾಹುಲ್ ಗಾಂಧಿಯ ಅಕ್ಟೋಬರ್ 23ರಂದು ಗುಜರಾತಿನ ರ‍್ಯಾಲಿಯಲ್ಲಿ ಸೇರಿದ್ದ ಜನಸ್ತೋಮ ಹಣಕ್ಕಾಗಿ ಬಂದಿದ್ದವರೆಂದೂ, ಅವರಾರೂ ಕಾಂಗ್ರೆಸ್ಸಿಗೆ ಬೆಂಬಲವಾಗಿ ಬಂದವರಲ್ಲವೆಂದು ಹೇಳುತ್ತಾ  ವೀಡಿಯೋ ಒಂದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿದ್ದರು. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಂಗ್ರೆಸ್ ಧ್ವಜ ಮತ್ತು ಭಿತ್ತಿಪತ್ರಗಳನ್ನು ಹಿಡಿದ, ಬಹುತೇಕ ಮಹಿಳೆಯರೇ ಸಾಲಿನಲ್ಲಿ ಬರುತ್ತಿದ್ದ ಆ ಗುಂಪಿನ ಪ್ರತಿಯೊಬ್ಬರಿಗೆ ಹಣವನ್ನು ಹಂಚುತ್ತಿದ್ದ ಮತ್ತು ಮುಂದೆ ಹೋಗುವಂತೆ ಸೂಚಿಸುತ್ತಿದ್ದ.

ಈ ವೀಡಿಯೋವನ್ನೇ ಬಂಡವಾಳ ಮಾಡಿಕೊಂಡ  ಬಿಜೆಪಿಯ ಅಭಿಮಾನಿಗಳು ಅದನ್ನು ಸಾಮಾಜಿಕ ತಾಣದಾದ್ಯಂತ ಶೇರ್ ಮಾಡಿದ್ದರು. ಆದರೆ ಈ ವೀಡಿಯೋ ಕುರಿತಾಗಿನ ಸತ್ಯಾಸತ್ಯತೆಯನ್ನು “ಎಬಿಪಿ ನ್ಯೂಸ್” ಬಯಲು ಮಾಡಿದ್ದು, ಬಿಜೆಪಿ ಅಭಿಮಾನಿಗಳ ನಕಲಿತನವನ್ನು ಬಯಲುಗೊಳಿಸಿದ್ದಾರೆ. ಈ ಮೂಲಕ ಬಿಜೆಪಿಯ ಹಿಂಬಾಲಕರು ಮತ್ತೊಮ್ಮೆ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದಾರೆ.

ವೀಡಿಯೋದ ಅಸಲಿಯತ್ತೇನು?

‘ಎಬಿಪಿ ನ್ಯೂಸ್” ಮೊದಲಾಗಿ ವೀಡಿಯೋದಲ್ಲಿರುವ ವ್ಯಕ್ತಿಗಳು ಮಾತನಾಡುತ್ತಿರುವ ಭಾಷೆ ಗುಜರಾತಿ ಅಲ್ಲವೆಂಬುವುದನ್ನು ಕಂಡು ಹಿಡಿದಿದ್ದರು. ತದ ನಂತರ ಆ ವೀಡಿಯೋದ ಮೂಲವನ್ನು ಅಂತರ್ಜಾಲ ತಾಣದಲ್ಲಿ ಹುಡುಕಿದಾಗ ಅವರಿಗೆ ಇನ್ನಷ್ಟು ಅಚ್ಚರಿ ಕಾದಿತ್ತು. ಏಕೆಂದರೆ ಆ ವೀಡಿಯೋ ಮಾರ್ಚ್ 2, 2017 ರಂದು ಅಪ್ಲೋಡ್ ಮಾಡಲಾಗಿತ್ತು!!  ಮತ್ತು ಅದರ ಕೆಳಗೆ “ಮಣಿಪುರದ ಇಂಪಾಲದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ” ಎಂಬ ಶೀರ್ಷಿಕೆ ನೀಡಲಾಗಿತ್ತು.  ಈ ವೀಡಿಯೋ ಯೂಟ್ಯೂಬ್’ಗೆ ಮಾರ್ಚ್ 2 ರಂದೇ ಅಪ್ಲೋಡ್ ಆಗಿರುವುದರಿಂದ, ರಾಹುಲ್ ಗಾಂಧಿ ಅಕ್ಟೋಬರ್ 23, 2017 ರಂದು ನಡೆಸಿದ್ದ ರಾಲಿಯದ್ದು ಆಗಿರಲು ಸಾಧ್ಯವೇ ಇಲ್ಲ.

ಒಟ್ಟಿನಲ್ಲಿ ಗುಜರಾತಿನಲ್ಲಿ ಏನೇ ಮಾಡಿಯಾದರೂ ಅಧಿಕಾರದಲ್ಲಿ ಮುಂದಿವರಿಯಬೇಕೆಂಬ ಬಿಜೆಪಿಯ ಹತಾಶ ಪ್ರಯತ್ನಗಳಿಗೆ ಸಾಮಾಜಿಕ ತಾಣಗಳಲ್ಲೇ ಸ್ಪಷ್ಟ ಪ್ರತ್ಯುತ್ತರ ಬರುತ್ತಿದೆ ಎಂಬುವುದು ಸುಳ್ಳಲ್ಲ

ಎಬಿಪಿ ನ್ಯೂಸ್ ಬಯಲಿಗೆಳೆದ ವೀಡಿಯೋ ವೀಕ್ಷಿಸಿ

 

 

 

 

error: Content is protected !!
%d bloggers like this:
Inline
Inline