ಸಾಮಾಜಿಕ ತಾಣ

“ಮೋದಿ ಪ್ರಧಾನ ಮಂತ್ರಿಯಾದಲ್ಲಿ ಆದಾಯ ತೆರಿಗೆ ಕೊಡಬೇಕಾಗಿಲ್ಲ” : 2014ರ ಚುನಾವಣೆಗೆ ಮುನ್ನ ಹೀಗೂ ನಡೆದಿತ್ತೊಂದು ಪ್ರಚಾರ !!

ಚುನಾವಣೆಯ ಸಮಯದಲ್ಲಿ ಭರವಸೆಗಳನ್ನು ನೀಡುವುದು ಸರ್ವೇ ಸಾಮಾನ್ಯ. ಭಾರತೀಯರಿಗಂತೂ ಚುನಾವಣಾ ಪೂರ್ವ ಭರವಸೆಗಳ ಮೇಲಿನ ನಂಬಿಕೆಯೇ ಹೊರಟು ಹೋಗುವ ಹಂತಕ್ಕೆ ತಲುಪಿದೆ.

ಚುನಾವಣೆಗೆ ಮುನ್ನ ಪೊಳ್ಳು ಭರವಸೆ ನೀಡುವಲ್ಲಿ ಎಲ್ಲಾ ಮಿತಿಗಳನ್ನೂ ಪಾರು ಮಾಡಿದ ಹೆಗ್ಗಳಿಕೆ ಭಾರತೀಯ ಜನತಾ ಪಕ್ಷಕ್ಕಿದೆ. 15 ಲಕ್ಷ, ರಾಮ ಮಂದಿರ, ಒಂದು ಸೈನಿಕನ ತಲೆಗೆ 10 ಪಾಕಿಸ್ತಾನಿಗಳ ತಲೆ, ಕಾಶ್ಮೀರ ಸಮಸ್ಯೆಯ ಪರಿಹಾರ ಇದೆಲ್ಲಾ ನಾವೆಲ್ಲರೂ ಕೇಳಿ ಕೇಳಿ ಸುಸ್ತಾಗಿದ್ದೇವೆ.

ಭ್ರಷ್ಟಾಚಾರ, ಬೆಲೆಯೇರಿಕೆಯ ವಿರುದ್ಧ ಹೋರಾಡಿದವರೆಲ್ಲ ಬಿಜೆಪಿಯ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಂತಾಗ ಹೆಚ್ಚಿನ ಅಮಾಯಕ ಮತದಾರರು ಅವರಲ್ಲಿ ವಿಶ್ವಾಸವನ್ನಿರಿಸಿದರು.

2014ರ ಚುನಾವಣೆಯ ವಿಜಯಕ್ಕಾಗಿ ಬಿಜೆಪಿಯು ಮಾಧ್ಯಮ, ಸಾಮಾಜಿಕ ಜಾಲತಾಣವನ್ನು ಚೆನ್ನಾಗಿ ಉಪಯೋಗಿಸಿತ್ತೆನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ. ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಪರವಾಗಿ ಹಲವಾರು ಕನಸುಗಳನ್ನು ಮಾಧ್ಯಮಗಳೂ ಮಾರಾಟ ಮಾಡಿದ್ದವು. ಇಂತಹ ಕನಸುಗಳಲ್ಲಿ ಆದಾಯ ತೆರಿಗೆಯ ನಿರ್ಮೂಲನೆಯೂ ಒಂದಾಗಿತ್ತು. ಹಿಂದಿ ಭಾಷೆಯ ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯ ತುಣುಕಿನ ಚಿತ್ರವೊಂದು ಇದೀಗ ಮೋದಿ ಪ್ರಧಾನ ಮಂತ್ರಿಯಾಗಿ ಮೂರು ವರ್ಷಗಳಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದಕ್ಕೂ ಕಾರಣಗಳಿಲ್ಲದಿಲ್ಲ. ಈ ಪತ್ರಿಕೆಯು ಪ್ರಕಟಿಸಿದ್ದ ಸುದ್ದಿಯೂ ಅಷ್ಟೇ ಗಂಭೀರವಾಗಿದೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದಲ್ಲಿ ಆದಾಯ ತೆರಿಗೆ ಕೊಡಬೇಕಾಗಿಲ್ಲ ಎಂದು ಹೇಳಿತ್ತು ಈ ಪತ್ರಿಕೆ.
ಈ ಸುದ್ದಿ ತುಣುಕಿನ ಪ್ರಕಾರ ಬಿಜೆಪಿಯು ಆದಾಯ ತೆರಿಗೆಯನ್ನ್ನೊಳಗೊಂಡಂತೆ ಎಲ್ಲಾ ನೇರ ಹಾಗೂ ಪರೋಕ್ಷ ತೆರಿಗೆಗಳ ನಿರ್ಮೂಲನೆಗೆ ಸಮಿತಿಯನ್ನು ರಚಿಸಿತ್ತು ಹಾಗೂ ಇದರ ನೇತೃತ್ವವನ್ನು ಬಿಜೆಪಿ ನಾಯಕ ನಿತಿನ್ ಗಡ್ಕರಿಯವರಿಗೆ ವಹಿಸಲಾಗಿತ್ತು. ಅಂದು ಹಲವರಿಗೆ ಬಿಜೆಪಿ ಪರವಾಗಿ ಅಮಾಯಕ ಮತದಾರರಿಗೆ ಕನಸು ಮಾರಾಟ ಮಾಡಿದ್ದ ಈ ಪತ್ರಿಕೆಯ ತುಣುಕನ್ನು ಈಗ ಜನರು ಉತ್ತಮ ಹಾಸ್ಯವಾಗಿಯೇ ಕಾಣುತ್ತಿದ್ದಾರೆ.

ಇನ್ನು ತೆರಿಗೆ ಯಾವ ರೀತಿ ಸುಧಾರಣೆಯಾಗಿದೆ ಎಂದು ನಾವು ತಿಳಿಸಬೇಕಿಲ್ಲ ತಾನೆ…??

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group