ಶ್ಯಾಂ ರಂಗೀಲಾರ ಮೋದಿ ಮಿಮಿಕ್ರಿಗೆ ತಬ್ಬಿಬ್ಬಾದ ನಟ ಅಕ್ಷಯ್ ಕುಮಾರ್ : ವೀಡಿಯೋ ವೈರಲ್ !

ವರದಿಗಾರ : ಸ್ಟಾರ್ ಪ್ಲಸ್ ಚಾನೆಲಿನಲ್ಲಿ ನಡೆಯುತ್ತಿರುವ ‘The great Indian Laughter Challenge’  ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮಾತಿನ ಶೈಲಿಯನ್ನು ಅನುಕರಣೆ ಮಾಡಿ ತೋರಿಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ವಾಟ್ಸಪ್ ಮಾಧ್ಯಮದಲ್ಲಿ ಈ ವೀಡಿಯೋ ಇಂದು ಬಹಳಷ್ಟು ಶೇರ್ ಆಗುತ್ತಿದೆ. ಹಾಸ್ಯ ಕಲಾವಿದ ಶ್ಯಾಂ ರಂಗೀಲಾ ಈ ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಈ ವೀಡಿಯೋ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿಕೊಡುತ್ತಿದ್ದಾರೆ.

ವೀಡಿಯೋದಲ್ಲಿ ರಾಜಸ್ಥಾನದ ಶೃಂಗಾರನಗರದ ನಿವಾಸಿಯಾಗಿರುವ ಶ್ಯಾಂ ರಂಗೀಲಾ, ಮೋದಿಯವರ ನವಂಬರ್ ಎಂಟರ ನೋಟ್ ಬ್ಯಾನನ್ನು ಹಾಸ್ಯಮಿಶ್ರಿತವಾಗಿ ಅನುಕರಣೆ ಮಾಡುತ್ತಲೇ ಪ್ರಾರಂಭಿಸುತ್ತಾರೆ. ‘ಇವತ್ತು ನಾನು ನಿಮಗೊಂದು ಕೆಟ್ಟ ಸುದ್ದಿಯನ್ನು ತಂದಿದ್ದೇನೆ. .ನೀವದನ್ನು ಕೇಳಿದ್ರೆ ನಿರಾಶೆಪಡುತ್ತೀರಾ. ಆದ್ರೂ ನೀವದನ್ನು ಸಹಿಸಬೇಕು. ಎಂದು ಹೇಳುತ್ತಾ ಮುಂದುವರೆಯುವ ಶ್ಯಾಂ ರಂಗೀಲಾ, ನಿನ್ನೆ ರಾತ್ರಿ 8 ಗಂಟೆಗೆ   ನಾನು ಟಿವಿ ನೋಡುತ್ತಿದ್ದೆ ಎಂದು ಮೋದಿಯ ಶೈಲಿಯಲ್ಲಿ, ಕಳೆದ ನವಂಬರ್ 8ರಂದು ಮೋದಿಯವರು ನೋಟ್ ಬ್ಯಾನ್ ಮಾಡಿದ ರೀತಿಯಲ್ಲಿ ತನ್ನ ಹಾಸ್ಯಭರಿತ ಶೈಲಿಯಲ್ಲಿ ಅವರನ್ನು ಅನುಕರಣೆ ಮಾಡುತ್ತಾರೆ. ತನ್ನ ಮಾತಿನ ಮೋಡಿಯ ಮಧ್ಯೆ ಶ್ಯಾಂ ರಂಗೀಲಾರವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನೂ ಅನುಕರಿಸುತ್ತಾರೆ.

ತನ್ನ ಪ್ರದರ್ಶನಕ್ಕೆ ಎಲ್ಲಾ ತೀರ್ಪುಗಾರರಿಂದ ಮೆಚ್ಚುಗೆ ಪಡೆದ ಶ್ಯಾಂ ರಂಗೀಲಾ, ಅಕ್ಷಯ್ ಕುಮಾರ್ ಅವರಂತೂ ಗೋಲ್ಡನ್ ಬೆಲ್ ಹೊಡೆಯುವ ಮೂಲಕ ಅವರನ್ನು ಅಂತಿಮ 12 ರ ಸುತ್ತಿಗೆ ತೇರ್ಗಡೆಗೊಳಿಸಿದರು. ರಂಗೀಲಾ ಕಳೆದ ವಾರ ಈ ಕಾರ್ಯಕ್ರಮದಿಂದ (Eliminate) ಹೊರದಬ್ಬಲ್ಪಟ್ಟಿದ್ದಾರೆ.

error: Content is protected !!
%d bloggers like this:
Inline
Inline