ಪ್ರತಿಭೆ

ಅಪಘಾತ – ಚಿಗುರೆಲೆ

ಮೆರೆಯುತಿಹನು
ಕ್ಯಾಮಾರ ಕಣ್ಣುಗಳಲಿ
ಸೆರೆ ಹಿಡಿಯುತಿರುವನು
ಉರುಳಿ ಬೀಳುವ
ಕರುಳ ಕೂಗಿನ ದ್ರೃಶ್ಯವನು…¡¡¡¡

ಮಾನವೀಯತೆ ತೋರದ
ಮನುಜನ
ದುರಾಸೆ ಎಷ್ಟೆಂದರೆ
ತಾ ಮುಂದು ,ತಾ ಮುಂದು..!!
ಎಂದು ಕೈಯಲ್ಲಿ ಹಿಡಿದಿಹರು
ಸೆಲ್ ಫೋನ್ ಗಳನ್ನು….¡¡¡¡

ಹರಿಯುತಿದೆ ರಕ್ತದೋಕುಳಿ
ಜಾರುತಿದೆ ಕಣ್ಣಿಂದ ಕಂಬನಿ
ಹಿಡಿದೇಳಲು ಅಸಾಧ್ಯವಾಗಿಹರು ..ನೆಲಕಚ್ಚಿನಿಂತ
ಸವಾರರು…..¡¡¡¡

ನೋಡುವ ಎರಡು ಕಣ್ಣು
ಸಾಕಾಗದಿರಬಹುದೆಂದು
ತೆರೆದಿಹರು ಮೂರನೆಯ ಕಣ್ಣು
ಸೆಲ್ ಫೋನಿನ ಕ್ಯಾಮಾರವನ್ನು…..¡¡¡

ಮೂಕಪ್ರೇಕ್ಷಕರ ರೀತಿ ನಿಂತಿಹರು
ಜನರು
ಕೈಯ್ಯಲಿ ಕ್ಯಾಮಾರವನ್ನು ಹಿಡಿದು
ಜಗಸಹಾಯಕ್ಕೆ ಬಾರದ
ಮನುಜನ ದುರಾಸೆಯಿಷ್ಟೇ…¡¡¡¡

ತಿಳುವಳಿಕೆ ಇಲ್ಲದವರಾದರು
ರಕ್ತ ಕಣದ ಬಣ್ಣ ಒಂದೇ ಎಂದು
ತಿಳಿಯದಾದರು
ಜಾತಿ-ಧರ್ಮವ ನೋಡಿ
ನಿಂತಿಹರು
ಕ್ಯಾಮಾರ ಹಿಡಿದ ಕೈಗಳಲಿ..¡¡¡¡

ಹಂಚಲ್ಪಟ್ಟಿತು ಜಾಲತಾಣಗಳಲ್ಲಿ
ನೈಜ ಕಣ್ಣಾರೆ ಕಾಣುವ
ದ್ರೃಷ್ಯದ ರೀತಿ…..
ಯಾಕಿಂದು ಜನರು ತಿಳಿಯದಾದರು
ನಾನೊಂದು ದಿನ ಇದೇ ರೀತಿ
ಯಾಗಬಹುದೇನೋ..ಎಂದು..¡¡¡¡

ಸಫ್ವಾನ್ ಕೂರತ್

ಚಿಗುರೆಲೆ

To Top
error: Content is protected !!
WhatsApp chat Join our WhatsApp group