ಪ್ರತಿಭೆ

ವರದಕ್ಷಿಣೆ ಗೋಳು – ‘ಚಿಗುರೆಲೆ’

 

ಸಫ್ವಾನ್ ಕೂರತ್

ಬಡಜೋಪಡಿಯೊಳಗೊಂದು ಗೋಳು
ಸಿರಿ ಮಹಡಿಯೊಳಗೆ ಸಿಂಗಾರದ ಧೂಳು
ಕೇಳುವವರು ಯಾರಯ್ಯ ಈ ಜೋಪಡಿಯೊಳಗಿನ ನೋವನು
ಕಾಲ ಕಳೆದಿಹರಿಂದು ಮನರಂಜನೆಯ ಕಾವನು
ಕಣ್ಣೀರು ಧಾರೆಯಾಗಿಯೇ ಉಳಿಯಬೇಕೆ ಈ ಜೋಪಡಿ ಹೆಣ್ಣಿಗೆ….●●●

ಅಂಧಕಾರದ ಜಗಕೆ ಮತ್ತೆ ಹಿಂದಿರುಗಬೇಕೆ
ಬೆಂದು ಕಾರುವ ಬಿಸಿಲಲಿ ನರಕಯಾತನೇ ಅನುಭವಿಸಬೇಕೇ

ಚಿಂದಿಯಾಗಿವೆ ಬೆಂದು ಕಾಲು ಸವೆದಿದೆ
ಮಂದಿರ,ಮಸೀದಿಗಳಲಿ ಮತ್ತೆ ಕೈಚಾಚಬೇಕೆ
ಹಿಂತಿರುಗಿ ನೋಡದ ಗಂಡುಮಕ್ಕಳ ನೆನೆದು ಕಣ್ಣೀರು ಹರಿಸಬೇಕೆ…●●●

ಕಟ್ಟಬೇಕಿಂದು ವರನಿಗೆ ವಧುವಿನ ಭಿಕ್ಕು ಹಣದ ಬಚ್ಚಲು ಮನೆ…
ಬೆಟ್ಟದಷ್ಟು ಸಾಲಮಾಡಿದ ತೀರಿಸಬೇಕು ವರದಕ್ಷಿಣೆಯಿಂದ
ಕುಚ್ಚಲು ಅಕ್ಕಿಗೆ ಪರದಾಡುವ ಜೋಪಡಿಯ ಮನೆ
ವರದಕ್ಷಿಣೆ ಗಾಯಕ್ಕೆ ಬಿದ್ದಿದೆ ಇವರ ಹಣೆ
ಪರರ ಧೂಷಣೆ ಮಾಡುವ ವರನಿಗೆ ಬೇಕಿಂದು ಜೋಪಡಿಯ ದಕ್ಷಿಣೆ..●●●

ಕಟ್ಟುಪಾಡಲಿ ಬೆಳೆದ ಬೆಳಕಿಗೆ ಕಿಂಡಿ ಕೊರೆದು ಕೊಡಿಸಿದ ಶಿಕ್ಷಣ
ಹುಟ್ಟುಪಾಡಲಿ ಹಣವ ಮೋಹವ ತೋರಿಸಿದವನಿಗೆ ಬೇಕಿಂದು ದಕ್ಷಿಣೆ
ಮರುಕಳಿಸುವ ಜಗದೊಳಗೆ ದುಷ್ಟ ನೀತಿಯ ಕೊನೆಗೊಳಿಸಲು ಅಸಾಧ್ಯವಾಗಿವೆ
ದಿನಕ್ಕೊಂದು ಹುಟ್ಟಿ ಸಾಯುವ ಸಂಘ ಸಂಸ್ಥೆಗಳು ಅದೇನೂ ಪ್ರತಿಫಲವ ನೀಡಿವೆ..●●●

ತಿಂದು ತೇಗುವ ಇಂದು ನಾಳೆಗಳು ಇಂದು ಹುಟ್ಟಿ ನಾಳೆ ಸಾಯುವ ದಿನಗಳು
ಹಣದ ಮೋಹವ ಹಿಡಿದು ಸಾಗದಿರು ಮನದ ದಾಹವ ತೀರಿಸದಿರು
ಜಗ ತೋರಿಸುವುದು ಇಂದು ಇಂದಿಗೆ…
ಮುಂದು ನಡೆಯೇ ಕೈಯ ಸಾಗಿಸುವವಳು ಅವಳು
ವರದಕ್ಷಿಣೆ ಎಂದು ಕೈ ಚಾಚದಿರು ಗೆಳೆಯಾ….●●●

ಸಫ್ವಾನ್ ಕೂರತ್

‘ಚಿಗುರೆಲೆ’

To Top
error: Content is protected !!
WhatsApp chat Join our WhatsApp group