ಗುಜರಾತ್: ಪಾಟೀದಾರ್ ನಾಯಕನಿಗೆ ಬಿಜೆಪಿಯಿಂದ 1 ಕೋಟಿಯ ಆಮಿಷ, 10 ಲಕ್ಷ ಮುಂಗಡ ಪಾವತಿ

ಬಿಜೆಪಿ ಸೇರಿದ್ದ ಒಂದೇ ದಿನದಲ್ಲಿ ನರೇಂದ್ರ ಪಟೇಲ್ ರಿಂದ ಸ್ಪೋಟಕ ಮಾಹಿತಿ

“ಬಿಜೆಪಿಯ ಅಸಲಿಯತ್ತು ಬಯಲುಗೊಳಿಸಲು ಪಕ್ಷ ಸೇರುವ ನಾಟಕವಾಡಿದ್ದೆ”

ಕಹಿ ಸುದ್ದಿಯೊಂದಿಗೆ ಅಂತ್ಯಗೊಂಡ ಅಮಿತ್ ಶಾ ಜನ್ಮದಿನಾಚರಣೆ!!

ಗುಜರಾತಿನ ಮೆಹ್ಸಾನಾದ ಪಾಟೀದಾರ್ ಅನಮತಿ ಆಂದೋಲನ ಸಮಿತಿಯ ಸಂಚಾಲಕರಾಗಿರುವ ನರೇಂದ್ರ ಪಾಟೀಲ್ ಆದಿತ್ಯವಾರದಂದು ರಾತ್ರಿ ಅಹಮದಾಬಾದಿನಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದು ಸ್ಪೋಟಕ ಮಾಹಿತಿಯನ್ನು ನೀಡಿದರು. ಶನಿವಾರದಂದು ಬಿಜೆಪಿ ಸೇರಿದ್ದ ಇವರು,ಬಿಜೆಪಿಯು ತನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು 1 ಕೋಟಿ ರೂಪಾಯಿಗಳ ಆಮಿಷವನ್ನು ನೀಡಿತ್ತು ಎಂದು ಅರೋಪಿಸಿದರು. ಇದರಲ್ಲಿ 10ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆಯೆಂದ ಇವರು ಆ ಹಣವನ್ನು ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶಿಸಿದರು.

ತಾನು ಬಿಜೆಪಿ, ವರುಣ್ ಪಟೇಲ್ ಹಾಗೂ ರೇಷ್ಮಾ ಪಟೇಲ್ ಅವರ ನಿಜ ಬಣ್ಣ ಬಯಲುಗೊಳಿಸಲು ಪಕ್ಷ ಸೇರುವ ನಾಟಕವನ್ನಾಡಿದ್ದೆ ಎಂದಿದ್ದಾರೆ. ಹಾರ್ದಿಕ್ ಪಟೇಲ್ ಸಹವರ್ತಿಗಳಾಗಿರುವ ವರುಣ್ ಪಟೇಲ್ ಹಾಗೂ ರೇಷ್ಮಾ ಪಟೇಲ್ ಶನಿವಾರದಂದು ಬಿಜೆಪಿ ಸೇರಿದ್ದರು. ವರುಣ್ ಪಟೇಲ್ ಜತೆಗಿನ ಆಡಿಯೋ ಟೇಪ್ ಕೂಡಾ ಬಹಿರಂಗಗೊಳಿಸುವುದಾಗಿ ನರೇಂದ್ರ ಪಟೇಲ್ ತಿಳಿಸಿದ್ದಾರೆ.

ಗುಜರಾತಿನಲ್ಲಿ ಬಿಜೆಪಿ ವಿರೋಧಿ ಅಲೆಯ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ನಾವೇ ಗೆಲ್ಲುತ್ತೇವೆಂದು ಬೀಗುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಿಗೆ ತೀವ್ರ ಮುಖಭಂಗ ತರಿಸಬಹುದೆಂದು ಅಭಿಪ್ರಾಯವರುವ ಈ ಘಟನೆ ಅವರ ಹುಟ್ಟು ಹಬ್ಬದ ದಿನವೇ ನಡೆದದ್ದು ಮಾತ್ರ ವಿಪರ್ಯಾಸ.

error: Content is protected !!
%d bloggers like this:
Inline
Inline