ಸಾಮಾಜಿಕ ತಾಣ

ಟಿಪ್ಪು ಜಯಂತಿಗೆ ನನ್ನನ್ನು ಆಹ್ವಾನಿಸದಿರಿ ಎಂಬ ಮನವಿ: ಟಿಪ್ಪು ಸುಲ್ತಾನ್ ಕ್ರೂರ ಕೊಲೆಗಾರ, ಮತಾಂಧ, ಸಾಮೂಹಿಕ ಅತ್ಯಾಚಾರಿ ಎಂದು ಜರಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ

ವರದಿಗಾರ: ಟಿಪ್ಪು ಜಯಂತಿಯನ್ನು ವೈಭವೀಕರಣ ಮಾಡುವುದು ನಾಚಿಕೆಗೇಡಿನ ಸಂಗತಿ. ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕದಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಅನಂತ್ ಕುಮಾರ್ ಹೆಗಡೆ ಮನವಿಯನ್ನು ಮಾಡಿದ್ದಾರೆ.

 

ಇದೇ ವಿಷಯದಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಚಿವರು,  ಟಿಪ್ಪು ಸುಲ್ತಾನ್ ಕ್ರೂರ ಕೊಲೆಗಾರ, ಮತಾಂಧ, ಸಾಮೂಹಿಕ ಅತ್ಯಾಚಾರಿ ಎಂದು ಉಲ್ಲೇಖಿಸಿರುವುದು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

ಇನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವರು, ಒಬ್ಬ ಕ್ರೂರ ನರಹಂತಕ, ದರಿದ್ರ ಮತಾಂಧ, ಅತ್ಯಾಚಾರಿ ಎಂದು ಚಾರಿತ್ರಿಕವಾಗಿ ದಾಖಲಾಗಿರುವ ವ್ಯಕ್ತಿಪೂಜೆಗೆ ನನ್ನನ್ನು ಆಹ್ವಾನಿಸಬೇಡಿ’ ಎಂದು ಹೇಳಿಕೊಂಡಿದ್ದಾರೆ.

1 Comment
To Top
error: Content is protected !!