ಸಾಮಾಜಿಕ ತಾಣ

ಕನ್ನಡದ ‘ಚೀಫ್’ ಎಡಿಟರ್ ಒಬ್ಬರ ‘ಚೀಪ್’ ಗಿಮಿಕ್! ಕಾನೂನು ಕ್ರಮಕ್ಕೆ ಮುಂದಾದ ಯುವತಿ!!

ವರದಿಗಾರ : ಕನ್ನಡ ದಿನಪತ್ರಿಕೆಯೊಂದರ ಪ್ರಧಾನ ಸಂಪಾದಕರಾಗಿರುವ ವಿಶ್ವೇಶ್ವರ ಭಟ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಸಾಮಾಜಿಕ ತಾಣಗಳ ರಾಷ್ಟ್ರೀಯ ಸಂಯೋಜಕಿಯಾಗಿರುವ ಹಸೀಬಾ ಅಮೀನ್ ಇವರಿಬ್ಬರ ತಿರುಚಿದ ಮತ್ತು ಅಷ್ಟೇ ಕೀಳು ಮಟ್ಟದ ಮನೋಸ್ಥಿಯನ್ನು ಪ್ರತಿಬಿಂಬಿಸುವ ಫೋಟೋ ಒಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ತನ್ನ ಅಭಿರುಚಿಯ ಮಟ್ಟವನ್ನು ಬಟಾಬಯಲುಗೊಳಿಸಿದ್ದಾರೆ.  ಈ ಕುರಿತು ಟ್ವಿಟ್ಟರ್’ನಲ್ಲೇ ಪ್ರತಿಕ್ರಿಯಿಸಿರುವ ಹಸೀಬಾ ಅಮೀನ್, ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ನಡೆದದ್ದೇನು?

ಅಕ್ಟೋಬರ್ 13 ರಂದು ರಾಹುಲ್ ಗಾಂಧಿಯನು ಭೇಟಿ ಮಾಡಿದ್ದ ಫೋಟೋವನ್ನು ಹಸೀಬಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ, ‘ನಾನು ಯಾರನ್ನು ಭೇಟಿ ಮಾಡಿದ್ದೇನೆ ಊಹಿಸಿ’ ಎಂದು ಬರೆದು ಪೋಸ್ಟ್ ಮಾಡಿದ್ದರು.

 

ಎಡಿಟ್ ಮಾಡಿದ್ದ ಅದೇ ಫೋಟೋವನ್ನು ಅಕ್ಟೋಬರ್ 17 ರಂದು ವಿಶ್ವೇಶ್ವರ್ ಭಟ್ ತನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಹಸೀಬಾ ಅವರ ಎಡಿಟ್ ಮಾಡಿದ್ದ ಟ್ವೀಟ್ ಫೋಟೋದಲ್ಲಿ ‘ನಾನು ಇವರನ್ನು ಎಲ್ಲಿ ಭೇಟಿ ಮಾಡಿದೆನೆಂದು ಊಹಿಸಿ’ ಎಂದು ಬರೆಯಲಾಗಿತ್ತು. ಫೋಟೋ ಹಿನ್ನೆಲೆಯಲ್ಲಿ ‘ಮಹಿಳೆಯರ ಟಾಯ್ಲೆಟ್’ ನಾಮಫಲಕ ಅದರಲ್ಲಿ ಕಾಣುವಂತೆ ಮಾಡಲಾಗಿತ್ತು.

ಅಷ್ಟೊಂದು ನೀಚ ಮಟ್ಟದ ಮನೋಸ್ಥಿತಿಯನ್ನು ಪ್ರತಿಬಿಂಬಿಸುವ ಆ ಫೋಟೋವನ್ನು ವಿಶ್ವೇಶ್ವರ್ ಭಟ್ ಟ್ವೀಟ್ ಮಾಡಿರುವುದಕ್ಕೆ ಎಲ್ಲಾ ಮೂಲಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಬಿಜೆಪಿಗರ ಪ್ರಚಾರ ರಾಯಭಾರಿಯಂತೆ ಪತ್ರಕರ್ತನ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ಸಂಪಾದಕನಿಂದ ಇದಕ್ಕಿಂತ ಹೆಚ್ಚಿನದೇನನ್ನು ನಿರೀಕ್ಷಿಸಬಹುದೆಂದು ಟ್ವಿಟ್ಟರಿಗರು ಪ್ರಶ್ನಿಸಿದ್ದಾರೆ.

ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಜಾಲತಾಣವೆಂದೇ ಖ್ಯಾತಿವೆತ್ತ ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಟ್ವೀಟ್ ಮಾಡಿ, ಇವರೆಲ್ಲರೂ ಒಂದೇ. ವಿಶ್ವೇಶ್ವರ್ ಭಟ್, ವಾಜಪೇಯಿ ಸರ್ಕಾರದ ಮಂತ್ರಿಯಾಗಿದ್ದ ಅನಂತ್ ಕುಮಾರರ ಕರ್ತವ್ಯದಲ್ಲಿದ್ದ ವಿಶೇಷ ಅಧಿಕಾರಿಯಾಗಿದ್ದವರು ಎಂದು ಟ್ವೀಟ್ ಮಾಡಿದ್ದಾರೆ.

ಅದರಂತೆಯೇ ಎಡಿಟೆಡ್ ಫೋಟೋ ಹಾಕಿದ್ದ ವಿಶ್ವೇಶ್ವರ್ ಭಟ್ಟರ ನಡೆಯನ್ನು ಖಂಡಿಸಿ ಟ್ವಿಟ್ಟರಿನಲ್ಲಿ ಹಲವರು ಅವರ ಹೀನ ಕೃತ್ಯವನ್ನು ಖಂಡಿಸಿದರು. ವಿಪರ್ಯಾಸವೆಂದರ ಟ್ವಿಟ್ಟರಿನಲ್ಲಿ ಈ ಕುರಿತು ಹಲವು ಟೀಕೆಗಳು ವ್ಯಕ್ತವಾಗುತ್ತಿದ್ದರೂ, ವಿಶ್ವೇಶ್ವರ್ ಭಟ್ ಮಾತ್ರ ಇನ್ನೂ ತನ್ನ ಟ್ವೀಟನ್ನು ಅಳಿಸದೆ ತನ್ನ ಅಸಭ್ಯತೆಯ ಮಟ್ಟವನ್ನು ಅಳೆಯಲು ಟ್ವಿಟ್ಟರಿಗರಿಗೆ ಇನ್ನೂ ಕಾಲಾವಕಾಶ ನೀಡುತ್ತಿದ್ದಾರೆ.

 

Most Popular

To Top
error: Content is protected !!