ಬಾಬರಿ ಮಸೀದಿಯಂತೆ ತಾಜ್ ಮಹಲ್ ಕೂಡ ಧ್ವಂಸಗೊಳ್ಳುತ್ತಿತ್ತು: ಆಝಂ ಖಾನ್ ಪ್ರತಿಕ್ರಿಯೆ

ವರದಿಗಾರ: 1992ರ ಡಿಸೆಂಬರ್ 6ರಂದು ಐಕ್ಯತೆಯ ಪ್ರತೀಕವಾಗಿದ್ದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಂತೆ ತಾಜ್ ಮಹಲ್ ಕೂಡ ಧ್ವಂಸಗೊಳ್ಳುತ್ತಿತ್ತು. ಆದರೆ ಅದು ಜಗತ್ತಿನಲ್ಲೇ ಪ್ರಸಿದ್ದಿಯನ್ನು ಪಡೆದ ಕಾರಣದಿಂದ ಮಾತ್ರ ತಾಜ್ ಮಹಲ್ ಇನ್ನೂ ಉಳಿದಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಹೇಳಿದ್ದಾರೆ

ಅವರು ತಾಜ್ ಮಹಲ್ ಬಗ್ಗೆ ಬಿಜೆಪಿಯ ಕೆಲ ನಾಯಕರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮೇಲಿನ ಮಾತನ್ನು ಹೇಳಿದ್ದಾರೆ.

ತಾಜ್ ಮಹಲ್ ಶಿವ ದೇವಾಲಯವಾಗಿತ್ತು. ಮೊಘಲರು ಶಿವ ದೇವಾಲಯವನ್ನು ಧ್ವಂಸಗೈದು ತಾಜ್ ಮಹಲ್ ನ್ನು ಕಟ್ಟಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆಯನ್ನು ನೀಡಿದ್ದರು.

error: Content is protected !!
%d bloggers like this:
Inline
Inline