ರಾಜ್ಯ ಸುದ್ದಿ

ಕಾಂಗ್ರೆಸ್ ಸಭೆಯಿಂದ ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿ ಔಟ್!

ವರದಿಗಾರ : ಸುದ್ದಿಗಳನ್ನು ತಿರುಚಿ ಮತ್ತು ಹಲವು ವಿವಾದಾತ್ಮಕ ವರದಿಗಳ ಮೂಲಕ ಆಡಳಿತಾರೂಢ ಬಿಜೆಪಿಗೆ ಖುಲ್ಲಂ ಖುಲ್ಲಾ ನಿಂತು ಬೆಂಬಲಿಸುವ ಚಾನೆಲ್’ಗಳಾಗಿರುವ ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿಯ ವರದಿಗಾರರನ್ನು ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿನ ತಮ್ಮ ಸಭೆಯಿಂದ ಹೊರ ಕಳುಹಿಸಿದ್ದಾರೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಕ್ಷದ ಸಾಮಾಜಿಕ ತಾಣಗಳ ಪೂರ್ವ ಸಿದ್ಧತೆಯ ಕುರಿತು ಮಾಹಿತಿ ನೀಡಲು ಕರೆದಿದ್ದ ಪಕ್ಷದ ಸಭೆಯಿಂದ ಈ ಎರಡು ಚಾನಲಿನ ವರದಿಗಾರರನ್ನು ಹೊರಗೆ ಹೋಗುವಂತೆ ಹೇಳಲಾಯಿತು.
ಇತರೆ ಮಾಧ್ಯಮಗಳಿಗೆ ಹೇಸಿಗೆ ತರಿಸುವ ರೀತಿಯಲ್ಲಿ ತಿರುಚಿದ ಸುದ್ದಿಗಳನ್ನು ಹಬ್ಬಿಸಿ ಆ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಈ ಎರಡು ಚಾನೆಲ್’ಗಳನ್ನು ಹೊರಗೆ ಕಳುಹಿಸಿದ ಗುಂಡೂರಾವ್’ರ ವರ್ತನೆಯನ್ನು ರಾಷ್ಟ್ರೀಯ ಮಾಧ್ಯಮ ಮಂಡಳಿ ಖಂಡಿಸಿದೆಯಾದರೂ, ಜನರು ಆ ಮೂಲಕವಾದರೂ ಇವುಗಳು ಪಾಠ ಕಲಿಯಲೆಂದು ಆಶಿಸುತ್ತಿದ್ದಾರೆ.

ರಾಬರ್ಟ್ ವಾದ್ರಾರವರ ವ್ಯವಹಾರಗಳ ಕುರಿತು ಇವೆರಡು ಚಾನೆಲ್’ಗಳು  ನಿರ್ವಹಿಸಿದ ರೀತಿಯನ್ನು ಗಮನದಲ್ಲಿಟ್ಟುಕೊಂಡು ಗುಂಡೂರಾವ್’ರವರು ವರದಿಗಾರರಿಗೆ ತನ್ನ ಪತ್ರಿಕಾಗೋಷ್ಟಿಯಿಂದ ಗೇಟ್’ಪಾಸ್ ನೀಡಿದರೆನ್ನಲಾಗಿದೆ. ಇದಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಮಾಧ್ಯಮಗಳು ಸತ್ಯದ ಕನ್ನಡಿಯಾಗಿರಬೇಕೇ ಹೊರತು ಬಿಜೆಪಿಯ ಮುಖವಾಣಿಯಾಗಿಯಲ್ಲ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯನಾಗಿರುವ ರಾಬರ್ಟ್ ವಾದ್ರಾರ ವಿರುದ್ಧ ಯಾವುದೇ ರೀತಿಯ ತನಿಖೆಯನ್ನು ಮಾಡಲು ಕೇಂದ್ರ ಸರಕಾರ ಸ್ವತಂತ್ರವಾಗಿದೆ. ಕಳೆದ 41 ತಿಂಗಳಲ್ಲಿ ಸತತವಾದ ಹಲವು ತನಿಖೆಗಳಿಂದ ಯಾವುದೇ ಅವ್ಯವಹಾರಗಳು ಬಯಲಾಗಿಲ್ಲ. ಅದು ಹರ್ಯಾಣ ಮತ್ತು ಮಧ್ಯಪ್ರದೇಶದಲ್ಲಿ ಸಾಬೀತಾಗಿದೆ. ಇದು ರಾಬರ್ಟ್ ವಾದ್ರಾ ತನ್ನ ವ್ಯವಹಾರವನ್ನು ಪಾರದರ್ಶಕವಾಗಿ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಗುಂಡೂರಾವ್ ಹೇಳಿದರು.

ತನ್ನ ಮಾತು ಮುಂದುವರೆಸಿದ ಗುಂಡೂರಾವ್, ಬಿಜೆಪಿಯ ಅಧ್ಯಕ್ಷ ಅಮಿತ್ ಶಾರವರ ಮಗ ಜಯ್ ಶಾರವರ ಅವ್ಯವಹಾರಗಳ ಕುರಿತು ಮೋದಿ ಇದುವರೆಗೂ ತುಟಿಪಿಟಿಕ್ ಎನ್ನಲಿಲ್ಲ. ಯಾವುದೇ ತನಿಖೆಗೂ ಆದೇಶಿಸಿಲ್ಲ. ಇದು ಅಚ್ಚರಿ ತರುವಂತಹಾ ವಿಷಯವಾಗಿದೆ. ದೇಶದ ಜನರು ಈ ಕುರಿತು ಸತ್ಯ ಹೊರಬರಲೆಂದು ಆಶಿಸುತ್ತಿದ್ದಾರೆ ಎಂದರು. ತನ್ನ ಮಗನ ನಿರಪರಾಧಿತ್ವ ಸಾಬೀತಾಗುವವರೆಗೆ ಅಮಿತ್ ಶಾ ಕೂಡಾ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಹಕರಿಸಬೇಕೆಂದು ಅವರು ಆಗ್ರಹಿಸಿದರು.

ಇವೆರಡು ಚಾನೆಲ್’ಗಳು ಜಯ್ ಶಾರವರ ಅವ್ಯವಹಾರಗಳ ಕುರಿತು ಯಾವುದೇ ವರದಿಗಳನ್ನು ಪ್ರಕಟಿಸದೆ ಪರೋಕ್ಷವಾಗಿ ಬಿಜೆಪಿಗೆ ಮತ್ತು ಅಮಿತ್ ಶಾಗೆ ನೆರವಾಗಿರುವುದು ಗಮನಾರ್ಹವಾಗಿದೆ. ಮಾತ್ರವಲ್ಲ ಕಳೆದ ಬಾರಿ ಗೌರಿ ಲಂಕೇಶ್ ಹತ್ಯೆಯಾದಾಗ ವರದಿಗಳನ್ನು ತಿರುಚಿದ್ದಕ್ಕಾಗಿ ಜೆ ಎನ್ ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್, ಗೌರಿ ಹತ್ಯೆ ವಿರೋಧಿಸಿ ನಡೆಸಿದ್ದ ಸಭೆಯಿಂದಲೂ ರಿಪಬ್ಲಿಕ್ ಟಿವಿ ಚಾನೆಲಿನ ವರದಿಗಾರನನ್ನು ಹೊರ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group