ರಾಷ್ಟ್ರೀಯ ಸುದ್ದಿ

ದೆಹಲಿಯ 87% ಜನರು ಈ ದೀಪಾವಳಿ ಹಬ್ಬವನ್ನು ಪಟಾಕಿ ಸಿಡಿಸದೇ ಆಚರಿಸುತ್ತಾರಂತೆ!

ಪಟಾಕಿ ನಿಷೇಧದ ವಿರುದ್ಧ ಪ್ರತಿಭಟಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರಿಗೆ ತೀವ್ರ ಮುಜುಗರ

ದೆಹಲಿಯ 87% ಜನರು ಪಟಾಕಿ ಸಿಡಿಸದೆ ದೀಪಾವಳಿ ಹಬ್ಬವನ್ನು ಆಚರಿಸಲು ತೀರ್ಮಾನಿಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲಿಸಿದ್ದಾರೆ. ಕಳೆದ ತಿಂಗಳು ಸುಪ್ರಿಂ ಕೋರ್ಟ್ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಿ ತೀರ್ಪು ನೀಡಿತ್ತು. ಈ ಬಗ್ಗೆ ಬಿಜೆಪಿ – ಸಂಘಪರಿವಾರದ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಲೋಕಲ್ ಸರ್ಕಲ್ ಎಂಬ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ದೆಹಲಿಯ 4500 ಜನರು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಸಮೀಕ್ಷೆಯಲ್ಲಿ ಭಾಗವಹಿಸಿದ 87% ಜನರು ಈ ಬಾರಿ ದೀಪಾವಳಿ ಹಬ್ಬವನ್ನು ಪಟಾಕಿ ಸಿಡಿಸದೆ ಆಚರಿಸುವುದಾಗಿ ತಿಳಿಸಿದ್ದಾರೆ. ಕೇವಲ 5% ಜನರು ಈಗಾಗಲೆ ಪಟಾಕಿ ಖರೀದಿಸಿರುವುದರಿಂದ ಅದನ್ನು ಸಿಡಿಸುತ್ತೇವೆ ಎಂದು ಹೇಳಿದರೆ ಇನ್ನುಳಿದ 8% ಜನರು ಅಕ್ರಮವಾಗಿ ಪಟಾಕಿ ಖರೀದಿಸುವ ವ್ಯವಸ್ಥೆಗಳಿರುವುದಾಗಿಯೂ, ಖರೀದಿಸಿ ಸಿಡಿಸುವುದಾಗಿಯೂ ತಿಳಿಸಿದ್ದಾರೆ.

 

 

 

ಜಗತ್ತಿನ ಅತೀ ಹೆಚ್ಚು ವಾಯು ಮಾಲಿನ್ಯಕ್ಕೊಳಗಾದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ದೆಹಲಿಯ ಮಾಲಿನ್ಯವು ವಿಶ್ವ ಸಂಸ್ಥೆಯಿಂದ ಉಲ್ಲೇಖಿಸಲ್ಪಟ್ಟ ಸುರಕ್ಷತಾ ಮಿತಿಗಿಂತ ಹೆಚ್ಚಾಗಿದೆ. ದೀಪಾವಳಿಯ ಸಮಯದಲ್ಲಿ ಪ್ರತೀ ವರ್ಷ ಈ ಮಾಲಿನ್ಯದ ಮಟ್ಟವು 5-10 ಪಟ್ಟಿನಷ್ಟು ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದೆ. ನಿಷೇದದ ವಿರುದ್ಧ ಬಲಪಂಥೀಯರು ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿವಾದಪ್ರಿಯ ವಕ್ತಾರನಾದ ತೇಜೀಂಧರ್ ಬಗ್ಗ ನಿಷೇಧವನ್ನು ವಿರೋಧಿಸಿ ದೆಹಲಿಯ ಮಕ್ಕಳಿಗೆ ಉಚಿತವಾಗಿ ಪಟಾಕಿಯನ್ನು ಹಂಚುವ ಮೂಲಕ ಪರಿಸರ ಪ್ರೇಮಿಗಳ ಆಕ್ರೋಶಕ್ಕೊಳಗಾಗಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group