ಮೋದಿಯನ್ನು ಟೀಕಿಸಿದ್ದಕ್ಕೆ ಪೇದೆಯನ್ನು ಅಮಾನತು ಮಾಡಿದರು

ವರದಿಗಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕಾರಣಕ್ಕೆ ಅಹ್ಮದ್ ನಗರದಲ್ಲಿ ಪೇದೆಯನ್ನೇ ಅಮಾನತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಶಾಸಕರೊಬ್ಬರ ಅಂಗರಕ್ಷಕರಾಗಿರುವ ರಮೇಶ್ ಶಿಂದೆ ಅವರು ಮೋದಿ ಅವರನ್ನು ಟೀಕಿಸಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಿಂದೆ ಈ ಹಿಂದೆ ಮಾಜಿ ಸಚಿವ ಬಾಳಾಸಾಹೇಬ್ ಥೊರಾತ್ ಅವರ ಬಾಡಿಗಾರ್ಡ್ ಆಗಿದ್ದರು.

‘ಜಿಲ್ಲಾ ಪೊಲೀಸ್ ಸೈಬರ್ ವಿಭಾಗದವರು ವಿಸ್ತೃತ ತನಿಖೆ ನಡೆಸಿದ ಬಳಿಕ ಶಿಂದೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಹ್ಮದ್‌ನಗರದ ಪೊಲೀಸ್‌ ಸುಪರಿಂಟೆಂಡೆಂಟ್ ರಂಜನ್‌ಕುಮಾರ್ ಶರ್ಮಾ ತಿಳಿಸಿದ್ದಾರೆ.

error: Content is protected !!
%d bloggers like this:
Inline
Inline