ಜಿಲ್ಲಾ ಸುದ್ದಿ

ಶಾಸಕ ಮೊಹಿದಿನ್ ಬಾವರನ್ನು ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು: ಪ್ರಕರಣ ದಾಖಲು

ವರದಿಗಾರ:ಶಾಸಕ ಮೊಹಿದಿನ್ ಬಾವರನ್ನು ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಪಣಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
(ಕೆ.ಐ.ಎ.ಡಿ.ಬಿ ) ಕಾಂಕ್ರೀಟ್ ರಸ್ತೆಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಶಾಸಕರ ಮುತವರ್ಜಿಯಿಂದ ಪಡೆದ  ಅನುದಾನದಲ್ಲಿ  ನಡೆಯುವ ರಸ್ತೆ ಅಭಿವೃದ್ಧಿಗೆ ಶಾಸಕರನ್ನು ಅಭಿನಂದಿಸಿ ಸ್ಥಳೀಯ ನಾಗರಿಕರು,  ಅಭಿಮಾನಿಗಳು ಬ್ಯಾನರ್ ಹಾಕಿದ್ದರು.
ಶಾಸಕರಿಗೆ ಅಭಿನಂದನೆ ಸಲ್ಲಿಸಿ ಹಾಕಲಾಗಿದ್ದ 4ಬ್ಯಾನರ್ ಬೋರ್ಡ್ ಗಳನ್ನು ಕಿಡಿಗೆಡಿಗಳು ಹರಿದು  ಹಾಕಿದ್ಪಲ್ಲದೇ  ಪದೇ ಬ್ಯಾನರ್ ವಿರೂಪ ಗೊಳಿಸಿ ಹರಿದು ಹಾಕುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕ ಮೊಹಿದಿನ್ ಬಾವರವರ ನಿರ್ದೇಶದಂತೆ ಶಾಸಕರ ಆಪ್ತ ಹಾರಿಸ್ ಬೈಕಂಪಾಡಿ ಪಣಂಬೂರು  ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

Most Popular

To Top
error: Content is protected !!