QISF ಕರ್ನಾಟಕದ ವತಿಯಿಂದ ‘ಗೌರಿ ಲಂಕೇಶ್ ಹತ್ಯೆ – ಪ್ರಜಾಪ್ರಭುತ್ವದ ಕಗ್ಗೊಲೆ’ ವಿಚಾರ ಸಂಕಿರಣ

ವರದಿಗಾರ:  ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯ ವಿರುದ್ಧ  ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ‘ಗೌರಿ ಲಂಕೇಶ್ ಹತ್ಯೆ – ಪ್ರಜಾಪ್ರಭುತ್ವದ ಕಗ್ಗೊಲೆ’  ವಿಚಾರ ಸಂಕಿರಣವು ಇತ್ತೀಚೆಗೆ ಕತಾರ್ ದೋಹಾದ  ಫ್ರೆಟರ್ನಿಟಿ ಹಾಲ್ ನಲ್ಲಿ ನಡೆಯಿತು.
ಇಂಡಿಯಾದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನುಬಂದೂಕಿನ ಮೂಲಕ ದಮನಿಸುವ ದುಷ್ಕೃತ್ಯಗಳು ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದು, ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿರುವ ಕರ್ನಾಟಕದಲ್ಲೂ ವಿಚಾರವಾದಿಗಳಾದ ಎಂ. ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ರವರ ಹತ್ಯೆ ನಡೆದಿದ್ದು ಇಂದಿನವರೆಗೂ ಆರೋಪಿಗಳನ್ನು ಬಂಧಿಸದ ಪೊಲೀಸರ ನಿಷ್ಕ್ರೀಯತೆಯ ವಿರುದ್ಧ ಸಭೆಯು ಆತಂಕವನ್ನು ವ್ಯಕ್ತಪಡಿಸಿತು.
ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದು ಭಯೋತ್ಪಾದನೆಗೆ ಮುನ್ನುಡಿ ಬರೆದ ದುಷ್ಟ ಶಕ್ತಿಗಳ ಮುಂದುವರಿದ ದಾಳಿಯಾಗಿದೆ . ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಡಳಿತ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೂಡ ಭಯಪಡುವಂತಹ ಪರಿಸ್ಥಿತಿಯನ್ನು ನೋಡುವಾಗ ಭಾರತದ ಭವಿಷ್ಯದ ಬಗ್ಗೆ  ಆತಂಕವನ್ನು ಸೃಷ್ಠಿಸುತ್ತದೆ.
ಜಗತ್ತಿನಲ್ಲೇ ಅತ್ಯಂತ ಸುಂದರ ಸಂವಿಧಾನ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನಸಾಮಾನ್ಯ ನಾಗರಿಕರಿಂದ  ಮಾತನಾಡುವ, ಬರೆಯುವ, ಆಹಾರವನ್ನು ಸೇವಿಸುವ ಹಕ್ಕನ್ನು ಕಸಿದುಕೊಂಡು, ಮನುವಾದವನ್ನು ಹೇರಲು ಹೊರಟಿರುವ ಸವರ್ಣೀಯರ ಅಜೇಂಡಾವನ್ನು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಜನಸಾಮಾನ್ಯರು ಒಂದಾಗಿ ಹೋರಾಟದ ಮೂಲಕ ತಡೆಗಟ್ಟಬೇಕಾದ ಅನಿವಾರ್ಯತೆಯಿದೆ.
ಕಾರ್ಯಕ್ರಮದಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫೋರಂನ ಕೇಂದ್ರ ವಲಯದ ಅಧ್ಯಕ್ಷ ಅಝೀಜ್ ಸುಭಾನ್, ಉದ್ಯಮಿ ಮುಮ್ತಾಜ್ ಹುಸೇನ್, ಫಾರೂಕ್ ಇಂಜಿನಿಯರ್  ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಕತಾರ್ ಇಂಡಿಯನ್ ಸೋಶಿಯಲ್ ಫೋರಂನ ಕರ್ನಾಟಕ ಘಟಕದ ಅಧ್ಯಕ್ಷ ನಜ್ಹೀರ್ ಪಾಷರವರು ವಹಿಸಿದ್ದರು.
ಚರ್ಚೆಯಲ್ಲಿ ಕತಾರ್ ಇಂಡಿಯನ್ ಫ್ರಟೆರ್ನಿಟಿ ಫೋರಂನ ಕರ್ನಾಟಕ ಘಟಕದ ಅಧ್ಯಕ್ಷ ಅಬ್ದುಲ್ ಲತೀಫ್ ಮಡಿಕೇರಿ, ಅನ್ವರ್ ಸಾದಾತ್ ಬಜತ್ತೂರ್, ಝಮೀರ್ ಹಳೆಯಂಗಡಿ, ಸಯೇದ್ ಕಲೀಮ್ ಖಾದ್ರಿ, ಉಸ್ಮಾನ್ ಬಂಗಾಡಿ, ಝುಲ್ಫಿಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ: ಖಲಂದರ್ ಜಾಲ್ಸೂರ್
error: Content is protected !!
%d bloggers like this:
Inline
Inline