‘ಸರ್ವ ಶಿಕ್ಷಣ ಅಭಿಯಾನ’ ರಾಜ್ಯದ ಶೂನ್ಯ ಸಾಧನೆ

ವರದಿಗಾರ: ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಣೆ, ಶಿಕ್ಷಕರ ಆಂತರಿಕ ತರಬೇತಿ ಮತ್ತು ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವಲ್ಲಿ ಕರ್ನಾಟಕ ರಾಜ್ಯದ ಸಾಧನೆ ಶೂನ್ಯವೆಂದು ಕೇಂದ್ರದ ವರದಿ ಹೇಳಿದೆ.

ಪ್ರಾಥಮಿಕ ಶಿಕ್ಷಣ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನಿಗದಿಪಡಿಸಲಾಗಿದ್ದ ಗುರಿ ತಲುಪಲು, ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಮತ್ತು ಶಾಲೆ ತೊರೆದ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರುವುದರಲ್ಲಿ ಕರ್ನಾಟಕ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಕಳಪೆ ಸಾಧನೆಯನ್ನು ತೋರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯದ ವರದಿ ತಿಳಿಸಿದೆ.

ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಮತ್ತು ಶಾಲೆ ತೊರೆದ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರುವುದರಲ್ಲಿ ಕರ್ನಾಟಕ ಕಳಪೆ ಸಾಧನೆ ತೋರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವರದಿ ಹೇಳಿದೆ.
ಪ್ರಪ್ರಥಮ ಬಾರಿ ಎಚ್‌ಆರ್‌ಡಿ ಸಚಿವಾಲಯ ನಡೆಸಿದ ಮೌಲ್ಯಮಾ‍ಪನ ಇದಾಗಿದೆ.

ಶಿಕ್ಷಣ ಅಭಿಯಾನದ ಅಡಿಯಲ್ಲಿ ರಾಜ್ಯಗಳು ಒಂದು ವರ್ಷದ ಅವಧಿಯಲ್ಲಿ ಮಾಡಬೇಕಾದ ಕೆಲಸಗಳನ್ನು ಸಚಿವಾಲಯ ನಿಗದಿ ಪಡಿಸಿತ್ತು.

ರಾಜ್ಯಗಳಿಗೆ ನೀಡಲಾಗಿದ್ದ ಗುರಿಗಳ ಅರ್ಧ ವಾರ್ಷಿಕ ಅವಧಿಯ ಪ್ರಗತಿಯನ್ನು ಸಚಿವಾಲಯ ಮೌಲ್ಯಮಾಪನ ನಡೆಸಿದ್ದು, 100 ಅಂಕಗಳಿಗೆ ಕರ್ನಾಟಕ 41–50 ಶ್ರೇಣಿಯ ಅಂಕ (ಗ್ರೇಡ್‌ ಸ್ಕೇಲ್‌) ಗಳಿಸಲು ಮಾತ್ರ ಸಾಧ್ಯವಾಗಿದೆ. ಆ ಮೂಲಕ ಕಳಪೆ ಸಾಧನೆ ತೋರಿದ ಬಿಹಾರದಂತಹ ರಾಜ್ಯಗಳೊಂದಿಗೆ ಗುರುತಿಸಿಕೊಂಡಿದೆ. ಉತ್ತಮ ಅಂಕ ಗಳಿಸಿರುವ ನೆರೆಯ ಕೇರಳ, ಪುದುಚೇರಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿವೆ.

 

error: Content is protected !!
%d bloggers like this:
Inline
Inline