ಅನಿವಾಸಿ ಕನ್ನಡಿಗರ ವಿಶೇಷ

ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ಘಟಕದ ಪ್ರಯತ್ನದಿಂದ ಚಿಕಿತ್ಸೆಗಾಗಿ ಭಾರತ ತಲುಪಿದ ತೆಲಂಗಾಣ ನಿವಾಸಿ ಮೊಹಮ್ಮದ್ ತಾಹಿರ್

ವರದಿಗಾರ : ಸೌದಿ ಅರೇಬಿಯಾದ ಕಮೀಸ್ ಮುಷೈತ್ ನಗರದಲ್ಲಿ ಹೌಸ್ ರ್ ಡ್ರೈವರ್ ಆಗಿ ದುಡಿಯುತ್ತಿದ್ದ ತೆಲಂಗಾಣ ರಾಜ್ಯದ ನಿವಾಸಿ ಮೊಹಮ್ಮದ್ ತಾಹಿರ್ ರವರು ಬ್ರೈನ್ ಹ್ಯಾಮರೇಜ್ ಆಗಿ ಕಮೀಸ್ ಮುಷೈತ್ ನಗರದ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು, ಚಿಕೆತ್ಸೆಗೆ ಸರಿಯಾಗಿ ಸ್ಪಂದಿಸದೆ ಇದ್ದ ಹಾಗೂ ನೋಡಿಕೊಳ್ಳುವವರು ಯಾರೂ ಇಲ್ಲದ ಇವರನ್ನು ಭಾರತಕ್ಕೆ ಚಿಕಿತ್ಸೆಗಾಗಿ ತಲುಪಿಸುವ ನಿಟ್ಟಿನಲ್ಲಿ ಇವರ ಕಫೀಲ್ ಪ್ರಯತ್ನ ಪಟ್ಟು ಫಲ ನೀಡದೆ ಇದ್ದಾಗ ಕೊನೆಗೆ ಭಾರತೀಯ ರಾಯಭಾರ ಕಛೇರಿ ಮೊರೆ ಹೋಗಿದ್ದರು , ಭಾರತೀಯ ರಾಯಭಾರ ಕಛೇರಿಯವರು, ಕಛೇರಿ ಜೆದ್ದ ಇದರ ಕಾನ್ಸುಲೇಟ್ ಸದಸ್ಯರೂ ಇಂಡಿಯನ್ ಸೋಶಿಯಲ್ ಫೋರಂನ ಕಮೀಸ್ ಮುಷೈತ್ ಘಟಕದ ಅಧ್ಯಕ್ಷರೂ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಮಂಜೇಶ್ವರರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಹನೀಫ್ ಮಂಜೇಶ್ವರ ಸಾನೌಶಾದ್ ಏರ್ ಅರೇಬಿಯಾ ಇವರನ್ನೊಳಗೊಂಡ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಇಲ್ಲಿನ ಅರೋಗ್ಯ ಇಲಾಖೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ಹಾಗೂ ವೀಸಾ ಪ್ರಾಯೋಜಕನನ್ನು ಭೇಟಿ ಮಾಡಿ ಧಾಖಲೆಗಳನ್ನು ಸರಿಪಡಿಸಿ ಅಗತ್ಯ ವೈದ್ಯಕೀಯ ನೆರವಿನೊಂದಿಗೆ ಮೊಹಮ್ಮದ್ ತಾಹಿರ್ ರವರನ್ನು ಭಾರತಕ್ಕೆ ತಲುಪಿಸುವ ನಿಟ್ಟಿನಲ್ಲಿ ಎಲ್ಲ ಕಡತಗಳನ್ನು ವ್ಯವಸ್ಥಿತಗೊಳಿಸುತ್ತಾರೆ

ಹೀಗೆ ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಷ್ಯತ್ ಘಟಕದ ಪರಿಶ್ರಮದ ಫಲವಾಗಿ ಮೊಹಮ್ಮದ್ ತಾಹಿರ್ ರವರನ್ನು ದಿನಾಂಕ 05.10.2017 ರಂದು ಅಭಾ ವಿಮಾನ ನಿಲ್ದಾನದಿಂದ ಹೈದೆರಾಬಾದ್ ವಿಮಾನ ನಿಲ್ದಾನದ ಮೂಲಕ ಅಗತ್ಯ ವೈದ್ಯಕೀಯ ನೆರವಿನೊಂದಿಗೆ ಭಾರತಕ್ಕೆ ಕಳುಹಿಸಿಕೊಡಲಾಯಿತು

ಇಂಡಿಯನ್ ಸೋಶಿಯಲ್ ಫೋರಂ ಕಮೀಷ್ ಮುಷೈತ್ ಘಟಕದ ನೆರವಿಗಾಗಿ ಮೊಹಮ್ಮದ್ ತಾಹಿರ್ ರವರ ಕಫೀಲ್ ಹಾಗೂ ಕುಟುಂಬಿಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ

ವರದಿ : ಶಾಹುಲ್ ಹಮೀದ್ ಕಾಶಿಪಟ್ಣ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group