ಸಿಂದಗಿಯಲ್ಲಿ ಕಾರ್ಮಿಕರ ಪ್ರತಿಭಟನೆ : ಮರಳು ಪೂರೈಕೆಗೆ ಆಗ್ರಹ

ವರದಿಗಾರ : ತಾಲೂಕಿನ ಕರ್ನಾಟಕ ಕಟ್ಟಡ ಪ್ಲಾಸ್ಟರ್, ಸೆಂಟರಿಂಗ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೂರಾರು ಕೂಲಿ ಕಾರ್ಮಿಕರು ಮರಳು ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಸೋಮವಾರ ತಹಸೀಲ್ದಾರ ವೀರೇಶ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಲವು ಮುಖಂಡರು ಮಾತನಾಡಿ, ಸರಕಾರ ಹಾಗೂ ಜಿಲ್ಲಾಡಳಿತ ಮರಳು ಪೂರೈಕೆಯಲ್ಲಿ ವೃಥಾ ಸಮಸ್ಯೆ ಬಿಂಬಿಸಿ ಕಟ್ಟಡ ನಿರ್ಮಾಣ ಕಾರ್ಯ ಗುತ್ತಿಗೆ ಹಿಡಿದು ಬದುಕುತ್ತಿರುವ ಕಟ್ಟಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊರೆಯುತ್ತಿದೆ ಎಂದು ಆರೋಪಿಸಿದರು.

ಇತರ ಜಿಲ್ಲೆಗಳಲ್ಲಿ ಮರಳು ಪೂರೈಕೆ ಆಗುತ್ತಿದ್ದರೂ ಸಹ ವಿಜಯಪುರ ಜಿಲ್ಲೆಯ ಕೆಲವೆಡೆ ಸಕಾಲಕ್ಕೆ ಮರಳು ಪೂರೈಕೆಯಾಗದ ಕಾರಣ ಒಂದುಕಡೆ ಬಿಲ್ಡಿಂಗ್‌ಗಳ ನಿರ್ಮಾಣ, ಪ್ಲಾಸ್ಟರ್ ಇಲ್ಲದೇ ಕಟ್ಟಡ ಮಾಲಿಕರು ತೊಂದರೆ ಅನುಭವಿಸಿದರೆ ಇನ್ನೊಂದೆಡೆ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ ಎಂದು ದೂರಿದರು.

ತಾಲೂಕಾಡಳಿತ ಮರಳು ಪೂರೈಸುವ ವಾಹನಗಳಿಗೆ ಸಾಗಾಟದ ಪರವಾನಿಗೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಮರಳು ಪೂರೈಸಬೇಕು. ಕಟ್ಟಡ ಕಾರ್ಮಿಕರ ಬದುಕಿಗೆ ಆಸರೆಯೊದಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಶ್ರೀಮಂತ ಹವಳಗಿ, ಮಹಿಬೂಬಸಾಬ ವಾಲಿಕಾರ, ಶ್ರೀಕಾಂತ ಶಿವಪುರ, ಮಹಾಂತೇಶ ತಳ್ಳೊಳ್ಳಿ, ಖಾಜು ಬಂಕಲಗಿ, ಪರಶುರಾಮ ಹೊಸಮನಿ, ಮಹಾಂತೇಶ ಪಡಗಾನೂರ, ರಾಜು ಬಡಿಗೇರ, ರಜಾಕಸಾಬ ಬೈರಾಮಡಗಿ, ರಫೀಕ ಮಣೂರ, ದಯಾನಂದ ಗೊಳಸಾರ, ಸಲೀಮಸಾಬ ಕಣ್ಣಿ, ಕೆಂಚಪ್ಪ ಪೂಜಾರಿ, ಅರ್ಜುನ ಮೇಸ್ತ್ರಿ, ಶ್ಯಾಮರಾವ ಮೇಸ್ತ್ರಿ, ಶರಣು ನರಬಳ್ಳಿ, ರವಿ ವಾಲಿಕಾರ, ಮಹಿಬೂಬ ಯಂಕಂಚಿ, ಬಸುಗೌಡ ಬಿರಾದಾರ, ಕಿಜ್ಜು ಖಾನಾಪೂರ, ಶ್ರೀಶೈಲ ಚೌರ, ಸದ್ದಾಮ ವಾಲಿಕಾರ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ ಮತ್ತು ಫೋಟೋ : ರವಿಚಂದ್ರ ಮಲ್ಲೇದ್

error: Content is protected !!
%d bloggers like this:
Inline
Inline