ಕಣ್ಣೂರು ಬಿಜೆಪಿ ಕಛೇರಿಯಲ್ಲಿ ಸ್ಟೀಲ್ ಬಾಂಬ್ ಸಹಿತ ಮಾರಕಾಯುಧಗಳು ಪತ್ತೆ!

ವರದಿಗಾರ: ಕೇರಳದ ಕಣ್ಣೂರಿನಲ್ಲಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದು, ಮಾರಕಾಸ್ತ್ರಗಳ ಸಹಿತ ಸ್ಟೀಲ್ ಬಾಂಬ್ ನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಸಿಪಿಎಂ ಕಾರ್ಯಕರ್ತರ ಮೇಲೆ ಕಚ್ಚಾ ಬಾಂಬ್ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಿಜೆಪಿ ಕಚೇರಿಗೆ ದಾಳಿ ನಡೆಸಿದ ಸಂದರ್ಭ 3 ಸ್ಟೀಲ್ ಬಾಂಬ್’ಗಳು, ತಲವಾರುಗಳು , ಸೈಕಲ್ ಚೈನ್ ಸಹಿತ ಮಾರಕಾಸ್ತ್ರಗಳು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿರುವುದಾಗಿ ಮೂಲಗಳು ವರದಿ ಮಾಡಿವೆ.

ಇಂದು ವಶಪಡಿಸಿಕೊಂಡಿರುವ ಮಾರಕಾಯುಧಗಳು

 

ಕಣ್ಣೂರು ಬಿಜೆಪಿ ಕಛೇರಿಯ ಕರಾಳ ಇತಿಹಾಸ!!

2016 ಅಕ್ಟೋಬರ್ 11 ರಂದು ಕಣ್ಣೂರಿನ ಬಿಜೆಪಿ ಕಛೇರಿಯಲ್ಲಿ ನಡೆಸಿದ್ದ ಪೊಲೀಸ್ ದಾಳಿಯಲ್ಲಿ ಕೂಡಾ ಇದೇ ರೀತಿಯ ನಾಡ ಬಾಂಬ್ ಸಹಿತ ಹಲವು ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು.  ಆ ವೇಳೆ ಮಹೇಶ್ ಎನ್ನುವ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿತ್ತು ಮತ್ತು ಇತರೆ 9 ಮಂದಿ ತಪ್ಪಿಸಿಕೊಂಡಿದ್ದರು. ಪೊಲೀಸ್ ವರದಿಯ ಪ್ರಕಾರ ಅಂದು ಸುಮಾರು 100 ಕ್ಕೂ ಹೆಚ್ಚು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪೊಲೀಸರು ವಶಪಡಿಸಿಕೊಂಡಿದ್ದ ಮಾರಕಾಯುಧಗಳು :

ಅದೇ ರೀತಿ ಕಳೆದ ಜೂನ್ 9 ರಂದು ಕಣ್ಣೂರಿನ ಬಿಜೆಪಿ ಕಛೇರಿಗೆ ದಾಳಿ ನಡೆಸಿದ್ದ ಪೊಲೀಸರು ಅಲ್ಲಿದ್ದ 9 ತಲವಾರುಗಳನ್ನು ಮತ್ತು ಒಂದು ಸ್ಟೀಲ್ ಬಾಂಬನ್ನು ವಶಪಡಿಸಿಕೊಂಡಿದ್ದರು. ಅಲ್ಲಿನ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿತ್ತು.

ಕಛೇರಿಯಿಂದ ವಶಪಡಿಸಿಕೊಂಡ ಆಯುಧಗಳು

 

 

error: Content is protected !!
%d bloggers like this:
Inline
Inline