ಸಾಮಾಜಿಕ ತಾಣ

ಅಮಿತ್ ಶಾರ ದಿಲ್ಲಿ ದರ್ಬಾರನ್ನು ನಡುಗಿಸಿದ ‘ದಿ ವೈರ್’ ಪತ್ರಕರ್ತೆ ರೋಹಿಣಿ ಸಿಂಗ್ ಹೇಳಿದ್ದೇನು ?

ವರದಿಗಾರ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರ ಮಗ ಜಯ್ ಶಾರವರ ಕಂಪನಿಯು ಕೇವಲ ಒಂದು ವರ್ಷದಲ್ಲಿ ಗಳಿಸಿರುವ ಸಂಶಯಾಸ್ಪದ ವಹಿವಾಟಿನ ಕುರಿತು ‘ದಿ ವೈರ್’ ಅಂತರ್ಜಾಲ ಸುದ್ದಿ ತಾಣದಲ್ಲಿ ಬರೆದು ದೇಶದಾದ್ಯಂತ ಚರ್ಚೆಯಲ್ಲಿರುವ ಪತ್ರಕರ್ತೆ ರೋಹಿಣಿ ಸಿಂಗ್ ತನ್ನ ಫೇಸ್ಬುಕ್ ಸ್ಟೇಟಸ್’ನಲ್ಲಿ ಈ ಕುರಿತು ಮನ ಬಿಚ್ಚಿ ಮಾತನಾಡಿದ್ದು, ಪ್ರಸಕ್ತ ಪತ್ರಿಕೋಧ್ಯಮದ ನೈತಿಕತೆಯೇ ಪ್ರಶ್ನಾರ್ಹವಾಗಲು ಕಾರಣವಾಗಿರುವ ಕೆಲ ‘ಮಾರಲ್ಪಟ್ಟ’ ಸುದ್ದಿ ವಾಹಿನಿಗಳ ಮತ್ತು ಪತ್ರಕರ್ತರ ಕುರಿತು ಪರೋಕ್ಷವಾಗಿ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಅವರು ಫೇಸ್ಬುಕ್’ನಲ್ಲಿ, ಇತರೆ ಪತ್ರಕರ್ತರಂತೆ ನಾನು ಆಕರ್ಷಕ ಸ್ಟೇಟಸ್’ಗಳನ್ನು ಬರೆಯಲಾರೆ. ನಾನು ನನಗಾಗಿ ಮಾತ್ರ ಮಾತನಾಡಬಲ್ಲೆ. ಅಧಿಕಾರದಲ್ಲಿರುವ ಶಕ್ತಿಗೆ ಸತ್ಯವನ್ನು ಮನದಟ್ಟು ಮಾಡುವ ಕೆಲವನ್ನು ನನಗೆ ಮಾಡಬಹುದಾಗಿದೆ. ಪ್ರಸಕ್ತ ಸರಕಾರವನ್ನು ಪ್ರಶ್ನಿಸಬಲ್ಲೆ.  ವಾಟ್ಸಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ತಾಣಗಳ ಅಬ್ಬರವಿಲ್ಲದಿದ್ದ 2011 ರಲ್ಲಿ ನಾನು ರಾಬರ್ಟ್ ವಾದ್ರಾರವರ ಇದೇ ರೀತಿಯ ವಹಿವಾಟಿನ ಕುರಿತು ತನಿಖಾ ವರದಿ ಸಿದ್ಧಪಡಿಸಿದಾಗ ನಾನು ಈಗ ಅನುಭವಿಸುತ್ತಿರುವಂತಹಾ ತೀವ್ರ ಕೀಳು ಮಟ್ಟದ ಟೀಕೆಗಳಾವುದನ್ನೂ ಕಂಡಿರಲಿಲ್ಲ. ಬೆದರಿಕೆಯಿಂದಾಗಿ ನೆಲ ಮಾಳಿಗೆಗಳಿರುವಂತಹಾ ಕಾಫಿ ಶಾಪ್’ಗಳಲ್ಲಿ ನಮ್ಮ ತಂಡದ ಸಭೆ ನಡೆಸಬೇಕಾಗಿರಲಿಲ್ಲ. ಬಿಜೆಪಿಯ ಹಿರಿಯ ನಾಯಕರೊಬ್ಬರ ಆಪ್ತರು ನಮ್ಮ ಕರೆ ದಾಖಲೆಗಳ ಮಾಹಿತಿ ಸಂಗ್ರಹಿಸಿ ಅದನ್ನು ಪಕ್ಷದ ಮುಖಂಡರಿಗೆ ಸಲ್ಲಿಸುತ್ತಾರೆ. ( ನನ್ನ ಪ್ರಕಾರ ಅದು ಅವರಿಗೆ ಒಳ್ಳೇಯದೇ!) ಇದೀಗಾಗಲೇ ಅಂತರ್ಜಾಲದಲ್ಲಿ ತೀರಾ ಕೀಳು ಮಟ್ಟದ ಕಾಲೆಳೆಯುವ ದೂಷಣೆ ಅಭಿಯಾನವೂ ಪ್ರಾರಂಭವಾಗಿದೆ.  ತಮ್ಮ ವಿರುದ್ಧ ಬರೆಯುವ ಪತ್ರಕರ್ತರನ್ನು ಹಿಡಿತದಲ್ಲಿಟ್ಟುಕೊಳ್ಳಲು ಅಧಿಕಾರರೂಢರು ಉಪಯೋಗಿಸುವಂತಹಾ ಅಸ್ತ್ರವೇ ಬೆದರಿಕೆ ಮತು ದೌರ್ಜನ್ಯ. ಯಾರೋ ಒಬ್ಬರು ಮಹನೀಯರು ಪತ್ರಿಕೋಧ್ಯಮದ ಬಗ್ಗೆ ಒಂದು ಮಾತು ಹೇಳಿದ್ದರು, ನಾನದನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ. ಅದೆಂದರೆ ‘ಸುದ್ದಿ ಎಂದರೆ ಯಾರೋ ಮುಚ್ಚಿಡಲು ಪ್ರಯತ್ನಿಸುತ್ತಿರುವ ಸಂಗತಿಗಳಷ್ಟೇ ಸುದ್ದಿ,  ಉಳಿದದ್ದೆಲ್ಲವೂ ಜಾಹೀರಾತು’ ಎಂದು. ಇತರರ ಬಗ್ಗೆ ನನಗ್ಗೊತ್ತಿಲ್ಲ, ಆದರೆ ನಾನಂತೂ ಸದ್ಯ ಬೇರೆ ವಿಚಾರಗಳಿಗೆ ಗಮನಹರಿಸಲು ಇಚ್ಚಿಸುವುದಿಲ್ಲ.  ಅದಕ್ಕಿಂತಲೂ ನಾನು ಪತ್ರಿಕಾರಂಗವನ್ನು ತೊರೆದು ನನ್ನ ಕಣ್ಣ ಮುಂದೆ ಕಾಣುವ ಪ್ರತಿನಿತ್ಯದ ಸಂಗತಿಗಳ ಬಗ್ಗೆಯಷ್ಟೇ ಸುದ್ದಿ ಮಾಡಿಕೊಂಡಿರುವುದು ಒಳಿತೆಂದು ಕಾಣುತ್ತದೆ.

ನಿಮ್ಮಲ್ಲಿ ಹಲವರು ಹಲವಾರು ರೂಪಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದೀರಿ ಮತ್ತು ನನಗೆ ಧೈರ್ಯ ತುಂಬುತ್ತಿದ್ದೀರಿ. ನಾನೋರ್ವ ಧೈರ್ಯವಂತೆ ಎಂದು ಈ ರೀತಿಯ ತನಿಖಾ ವರದಿಗಳನ್ನು ಮಾಡುತ್ತಿಲ್ಲ , ಬದಲಾಗಿ ಇದಾಗಿದೆ ನೈಜ ಪತ್ರಿಕೋಧ್ಯಮ, ಇದು ಶೌರ್ಯವಲ್ಲ.

ಅವರ ಮಾತುಗಳಲ್ಲಿ ನೈಜ ಪತ್ರಿಕೋಧ್ಯಮ ಎದುರಿಸಬೇಕಾಗಿರುವ ಸವಾಲುಗಳಿದೆ. ಕಹಿ ವಾಸ್ತವಗಳನ್ನು ಜನರೆದುರಿಗೆ ತೆರೆದು ಹೇಳಬೇಕಾಗಿ ಬಂದಾಗ ಬಂದೆರಗುವ ಸಂಕಷ್ಟಗಳ ಕುರಿತಾಗಿನ ಕಾಳಜಿಯಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group